ಕೊರೊನಾಸೋಂಕು, ಆರ್ಥಿಕ ಪರಿಹಾರ ಮಸೂದೆಗೆ ಟ್ರಂಪ್ ಅಂಕಿತ

0
6
ವಾಷಿಂಗ್ಟನ್:- ಉಚಿತ ಕರೋನಾ ಚಿಕಿತ್ಸೆ, ಕಡಿಮೆ  ಆದಾಯದ ಜನರಿಗೆ ಆಹಾರ ಖಾತ್ರಿ  ಒದಗಿಸುವ,  ಕಾಂಗ್ರೆಸ್ ಅಂಗೀಕರಿಸಿದ ಬಹುಕೋಟಿ ಡಾಲರ್ ಕೊರೊನಾ    ಆರ್ಥಿಕ ಪರಿಹಾರ ಮಸೂದೆ,  ಕಾಯಿದೆಯಾಗಿ ಜಾರಿಗೆ ಬರಲು  ಅನುವಾಗುವಂತೆ ಅಮೆರಿಕ ಅಧ್ಯಕ್ಷ  ಡೋನಾಲ್ಡ್ ಟ್ರಂಪ್  ಸಹಿ ಹಾಕಿದ್ದಾರೆ.
ಬಡ ಕುಟುಂಬಗಳಿಗೆ ನೆರವಾಗಲು ಈ ಮಸೂದೆ ಸಹಾಯವಾಗಲಿದೆ ಎಂದು ನಂತರ  ಟ್ರಂಪ್ ಹೇಳಿದ್ದಾರೆ.
ಈ ಕಾಯಿದೆಯು ತುರ್ತು ಪೂರಕ ವಿನಿಯೋಗ ಮತ್ತು ಕಾನೂನಿನ ಇತರ ಬದಲಾವಣೆಗೆ  ಅವಕಾಶ  ಮಾಡಿಕೊಡಲಿದೆ ಎಂದು ಶ್ವೇತಭವನ ಉಲ್ಲೇಖಿಸಿದಂತೆ ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಸೂದೆಯು ಕೋವಿಡ್ ಸೋಂಕಿನ  ಉಚಿತ ಪರೀಕ್ಷೆಗೆ ಸಹಾಯ ಮಾಡಲಿದೆ , ತುರ್ತು ಪಾವತಿಸಿದ ರಜೆ , ಮೇಲಾಗಿ  ಕಡಿಮೆ ಆದಾಯದ ಕುಟುಂಬಗಳಿಗೆ ಒಂದು  ಬಿಲಿಯನ್ ಆಹಾರ ಸಹಾಯವನ್ನು ಖಾತ್ರಿಗೊಳಿಸುವ   ಮತ್ತು ನಿರುದ್ಯೋಗ ವಿಮೆಗೆ ಹಣಕಾಸು   ಸೌಲಭ್ಯ  ಒದಗಿಸಲಿದೆ   ಎಂದು ಅವರು ಹೇಳಿದರು.
ಇದೇ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19  ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು . ವಿಶ್ವಾದ್ಯಂತ 200,000 ಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದು, 8,700 ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದೆ.
loading...