ಮುಂಬೈ ನಗರದಲ್ಲಿ  ಉಗುಳಿದರೆ ೧,೦೦೦ ರೂಪಾಯಿ ದಂಡ…!

0
12

ಮುಂಬೈ:- ಕೊರೊನಾ ವೈರಸ್  ಹಬ್ಬುತ್ತಿರುವ  ಹಿನ್ನಲೆಯಲ್ಲಿ  ಸಾರ್ವಜನಿಕ ಸ್ಥಳಗಳಲ್ಲಿ  ಸ್ವಚ್ಛತೆ ಕಾಪಾಡಲು ಬೃಹನ್ ಮುಂಬೈ ಮುನಿಸಿಪಲ್  ಕಾರ್ಪೋರೇಷನ್ ( ಬಿಎಂಸಿ)   ಸಂಚಲದ ನಿರ್ಧಾರ  ಕೈಗೊಂಡಿದೆ.
ಮುಂಬೈ ಬೃಹತ್  ಮಹಾನಗರದ ಸಾರ್ವಜನಿಕ ಸ್ಥಳಗಳಲ್ಲಿ  ಉಗುಳಿದರೆ   ೧,೦೦೦ ರೂ  ದಂಡ  ವಿಧಿಸಲು   ಬಿಎಂಸಿ  ನಿರ್ಣಯಿಸಿದೆ.
ನಿರ್ಣಯ  ಜಾರಿಯ ಭಾಗವಾಗಿ  ಮುಂಬೈ ನಗರದಲ್ಲಿ   ಬಹಿರಂಗ ಸ್ಥಳಗಳಲ್ಲಿ  ಉಗುಳಿದ  ೧೦೭   ಮಂದಿಯಿಂದ ೧.೦೭ ಲಕ್ಷ ರೂಪಾಯಿ  ದಂಡವನ್ನು ಸಂಗ್ರಹಿಸಿದ್ದೇವೆ  ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ೪೬ ಮಂದಿಗೆ   ಸಾರ್ವಜನಿಕವಾಗಿ ಉಗುಳದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ವೈರಸ್   ಸೋಂಕು  ಹಬ್ಬುವುದನ್ನು ತಡೆಗಟ್ಟಲು ನಾಗರೀಕರು ಸಹಕರಿಸಬೇಕೆಂದು ಬಿಎಂಸಿ ಅಧಿಕಾರಿಗಳು ಮುಂಬೈ ಜನರಿಗೆ ಮನವಿಮಾಡಿದ್ದಾರೆ. ಸಾರ್ವಜನಿಕ  ಸ್ಥಳಗಳಲ್ಲಿ  ಉಗುಳುವವರಿಗೆ ಸಾವಿರ ರೂಪಾಯಿ ದಂಡ  ಅಥವಾ ಭಾರತೀಯ ದಂಡ ಸಂಹಿತೆಯ  ಸೆಕ್ಷನ್ ೧೮೯ ರ ಅಡಿ ಬಂಧಿಸಲಾಗುವುದು ಎಂದು ಬಿಎಂಸಿ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

loading...