ಅನೈತಿಕ ಸಂಬಂಧ; ಪತಿಯನ್ನು ಕೊಲೆಗೈದ ಪತ್ನಿ, ಪ್ರೀಯಕರಿನಿಗೆ ಜೀವಾವದಿ ಶಿಕ್ಷೆ*

0
59

*ಅನೈತಿಕ ಸಂಬಂಧ; ಪತಿಯನ್ನು ಕೊಲೆಗೈದ ಪತ್ನಿ, ಪ್ರೀಯಕರಿನಿಗೆ ಜೀವಾವದಿ ಶಿಕ್ಷೆ*

ಬೆಳಗಾವಿ: ಅನೈತಿಕ ಸಂಬAಧವನ್ನು ಮುಚ್ಚಿಹಾಕಲು ಪತ್ನಿ ತನ್ನ ಪ್ರಿಯಕರನೊಂದಿಗೆ ಗಂಡನನ್ನೇ ಕೊಲೆಗೈದ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಇಲ್ಲಿನ ೧೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರೂ ಆಪಾದಿತರಿಗೆ ಜೀವಾವಧಿ ಜೈಲು ವಾಸದ ಶಿಕ್ಷೆ ಮತ್ತು ದಂಡವನ್ನು ವಿಧಿಸಿ ಗುರುವಾರ ತೀರ್ಪು ನೀಡಿದೆ.
ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರ ತೀರ್ಪಿನ ಹಿನ್ನೆಲೆಯಲ್ಲಿ ಆಪಾದಿತರಾದ ಗೋಕಾಕ ತಾಲ್ಲೂಕಿನ ಕೈತನಾಳ ಗ್ರಾಮದ ನಿವಾಸಿಗಳಾದ ಹಾಲಸಿದ್ದ ಹೊಳೆಪ್ಪ ಹನಮಸಾಗರ ಮತ್ತು ಮೃತನ ಪತ್ನಿ ರೇಣುಕಾ ಯಲ್ಲಪ್ಪ ಬಾಲನಾಯಿಕ ಶಿಕ್ಷೆಗೆ ಗುರಿಯಾಗಿದ್ದಾರೆ.
ಹಿನ್ನೆಲೆ: ೨ನೇ ಆಪಾದಿತೆಯು ೧ನೇ ಆಪಾದಿತನೊಂದಿಗೆ ಹೊಂದಿದ್ದಳು ಎನ್ನಲಾದ ಅನೈತಿಕ ಸಂಬAಧದಿAದಾಗಿ, ತನ್ನ ಗಂಡ ಯಲ್ಲಪ್ಪ ಸಿದ್ರಾಮಪ್ಪಾ ಬಾಲನಾಯಿಕ (೪೨) ಎಂಬಾತನಿAದ ತನ್ನನ್ನು ಬೇರೆ ಕಡೆಗೆ ಕರೆದೊಯ್ಯುವಂತೆ ಒತ್ತಾಯಿಸಿದ್ದರಿಂದ, ೨೦೧೮ರಲ್ಲಿ ಇಬ್ಬರೂ ಆಪಾದಿತರು ಲೋಂಡಾ ಮತ್ತಿತರ ಕಡೆಗಳಲ್ಲಿ ಸುತ್ತಾಡಿ ಎಲ್ಲೆಯೂ ನೆಲೆಕಂಡುಕೊಳ್ಳಲು ಆಗದೇ ಮರಳಿ ಸ್ವ-ಗ್ರಾಮ ಕೈತನಾಳಕ್ಕೆ ವಾಪಸಾಗಿದ್ದರು ಎನ್ನಲಾಗಿದೆ.
ಹೀಗೆ ವಾಪಸಾದ ಆಪಾದಿತರು, ೨ನೇ ಆಪಾದಿತೆ ರೇಣುಕಾಳ ಗಂಡ ಯಲ್ಲಪ್ಪನನ್ನು ಕೊಲೆಗೈಯ್ಯಲು ಸಂಚು ರೂಪಿಸಿ ಸನ್ ೨೦೧೮ರ ಜೂನ್ ೧೭ರಂದು ರಾತ್ರಿ ಆತ ಮನೆಯಲ್ಲಿ ನಿದ್ರೆಗೆ ಜಾರಿದ ವೇಳೆ ಇಬ್ಬರೂ ಆಪಾದಿತರು ಹರಿತವಾದ ಆಯುಧಗಳಿಂದ ಯಲ್ಲಪ್ಪನ ತಲೆ, ಎದೆ ಮತ್ತು ಮರ್ಮಾಂಗದ ಮೇಲೆ ಹಲ್ಲೆ ನಡೆಸಿ ಕೊಲೆ ಗೈದಿದ್ದಾರೆ ಎಂದು ದೂರಿ ಮೃತ ಯಲ್ಲಪ್ಪನ ಸಹೋದರ ಅರ್ಜುನ ಎಂಬಾತ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದನು.
ಹೀಗೆ ದಾಖಲಾಗಿದ್ದ ದೂರನ್ನು ಆಧರಿಸಿ ಪ್ರಕರಣದ ತನಿಖೆ ನಡೆಸಿದ್ದ ಆಗಿನ ಗೋಕಾಕ ಸಿಪಿಐ ಸಿ.ಕಿರಣ ಅವರು, ಆಪಾದಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಅಭಿಯೋಜಕ ರಾಜಮಹೇಂದ್ರ ಜಿ. ಕಿರಣಗಿ ವಾದಿಸಿದ್ದರು.

loading...