ನಿರ್ಭಯಾ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಕೊನೆಗೂ ಗಲ್ಲು

0
3

ನವದೆಹಲಿ- 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಶುಕ್ರವಾರ ಬೆಳಿಗ್ಗೆ 05.30 ಗಂಟೆಗೆ ಗಲ್ಲಿಗೇರಿಸಲಾಯಿತು. ಘಟನೆ ನಡೆದ ಏಳು ವರ್ಷ ಮತ್ತು ಮೂರು ತಿಂಗಳ ಬಳಿಕ ದುಷ್ಟ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ನಿರ್ಭಯಾಳಿಗೆ ನ್ಯಾಯ ಒದಗಿಸಲಾಗಿದೆ.
ಮರಣದಂಡನೆಯನ್ನು ವಿಳಂಬಗೊಳಿಸುವ ಅವರ ವಕೀಲ ಎ.ಪಿ ಸಿಂಗ್ ಅವರ ಕೊನೆಯ ಪ್ರಯತ್ನವನ್ನು ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
ವಕೀಲರು ಗುರುವಾರ ಹೈಕೋರ್ಟ್‌ಗೆ ಸಂಪರ್ಕಿಸಿದರೂ ವ್ಯರ್ಥವಾಯಿತು.
2012 ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆದ ಪಾಪಿಗಳಾದ ಅಕ್ಷಯ್ ಠಾಕೂರ್ (31), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಮುಖೇಶ್ ಸಿಂಗ್ (32) ಅವರನ್ನು ಇಲ್ಲಿನ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

loading...