ಕೊರೋನಾ ವೈರಾಣು ಜಿಲ್ಲಾಡಳಿತ ಕಟ್ಟೆಚ್ಚರ

0
10

*ಕೊರೋನಾ ವೈರಾಣು ಜಿಲ್ಲಾಡಳಿತ ಕಟ್ಟೆಚ್ಚರ*

*ಕೊರೋನಾಗೆ ವರುಣ ಪುಷ್ಠಿ; ಆತಂಕದಲ್ಲಿ ಜನತೆ | ಜಿಲ್ಲಾಡಳಿತದಿಂದ ತೀವ್ರ ನಿಗಾ, ಕಟ್ಟೆಚ್ಚರ*

*ಅಶೋಕ ಬಾ. ಮಗದುಮ್ಮ*

ಬೆಳಗಾವಿ: ಮಾಹಾಮಾರಿ ಕೊರೋನಾ ರಾಜ್ಯದ ಕೆಲವೊಂದು ಜಿಲ್ಲೆಗಳಿಗೆ ದಿನ ದಿನಕ್ಕೆ ವಿಸ್ತಾರಗೊಳುತ್ತಿದಂತೆ ವಿದೇಶದಿಂದ ಆಗಮಿಸಿದ ಕೆಲವೊಂದು ಜನರ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಕಳೆದವಾರಷ್ಟೆ ಜಿಲ್ಲೆಯಲ್ಲಿ ಮೂವರಲ್ಲಿ ಕೊರೋನಾ ವೈರಾಣು ಶಂಕೆ ವ್ಯಕ್ತವಾಗಿತ್ತು, ಈ ಹಿನ್ನೆಲ್ಲೆಯಲ್ಲಿ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಆದರೂ, ನಾಲ್ಕೈದು ದಿನಗಳಲ್ಲಿ 95 ಜನರಿಗೆ ಕೊರೋನಾ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.
ವಿದೇಶಗಳಲ್ಲಿ ಮರಣಮೃದಂಗ ಬಾರಿಸಿ, ಕೊರೋನಾ ದೇಶಕ್ಕೆ ಅಂಟಿಕೊಂಡು ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದೆ. ಜಿಲ್ಲಾಡಳಿತ ವೈದ್ಯರು, ಸೈನಿಕರು, ಅದೆಷ್ಟೂ ಸಂಘ- ಸಂಸ್ಥೆಗಳು ಕೊರೋನಾ ಜಾಗೃತಿಗಾಗಿ ಬೀದಿಗಿಳಿದಿರುವುದು ಹೆಮ್ಮೆಯ ವಿಷಯ. ಕೊರೋನಾ ಬಗ್ಗೆ ನಿರ್ಲಕ್ಷ್ಯಿಸಿದ ಕೆಲವೊಂದು ರಾಷ್ಟ್ರಗಳು ಈಗಾಗಲೇ ಪೆಟ್ಟು ತಿಂದಿವೆ. ದೇಶದಲ್ಲಿ ಕೊರೋನಾ ಭೀತಿಯಿಂದ ದೇವಸ್ಥಾನ, ಮಾಲ್, ರೆಸ್ಟೊಂರೆಂಟ್, ತರಕಾರಿ ವ್ಯಾಪಾರ ಪಾತಾಳಕ್ಕೆ ಕುಸಿದಿದೆ.
ತಾಪಮಾನದ ಮಧ್ಯೆ ಆವಾಂತರ ಸೃಷ್ಟಿಸಿ ಗುರುವಾರ ಅಬ್ಬರಿಸಿದ ಮಳೆಗೆ ಜನರಲ್ಲಿ ಮತ್ತಷ್ಟೂ ಆತಂಕದ ಬೀತಿ ಎದುರಾಗಿದೆ.
ಧಾರಾಕಾರ ಮಳೆಯಿಂದ ಭೂಮಿ ತಂಪಾದರೆ, ಕೊರೋನಾ ಬೀತಿಯಲ್ಲಿರುವ ಜಿಲ್ಲೆ ಜನತೆಗೆ ಈ ಮಳೆಯಿಂದ ಮನದಲ್ಲಿ ಕಂಪನ ಸೃಷ್ಟಿಸುತ್ತಿದೆ.
ಬೀಸಿಲ ಏಟಿಗೆ ಕರಗುವ ಕೊರೋನಾ, ಮಳೆ ಹಾಗೂ ತಂಪಿನ ವಾತಾವರಣಕ್ಕೆ ಪುಷ್ಠಿ ಕೊಟ್ಟಿದೆ. ಈ ಶೀತಲ ವಾತಾವರಣಕ್ಕೆ ಕೊರೋನಾ ಸೊಂಕು ಹರಡುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಭೀತಿಯಲ್ಲಿರುವವರಿಗೆ ಮತ್ತಷ್ಟೂ ಆತಂಕ ಮನೆ ಮಾಡಿದೆ.
ದೇಶದಲ್ಲಿ ನಿತ್ಯವೂ ಕೊರೋನಾ ಗಿಡ ಬಳ್ಳಿಯಂತೆ ಹಬ್ಬುತ್ತಲೇ ಇದೆ. ದೇಶಾದ್ಯಂತ ಕಟ್ಟೆಚ್ಚರ ವಹಿಸಿದರು ಮಹಾಮಾರಿ ಕೊರೋನಾ ಸದ್ದಿಲದೆ ನುಸುಳಿ ದೇಶದ ಜನತೆಯನ್ನು ಆತಂಕಕ್ಕೆ ತಂದು ನಿಲ್ಲಿಸಿದೆ.

ಬಾಕ್ಸ್===
ಎಲ್ಲಾ ಕಡೆಗೂ ಈ ಭೀತಿ ಇದೆ. ರೈಲ್ವೆ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿ ಸ್ಕ್ರೀನಿಂಗ್ ಟೆಸ್ಟ್ ಒಳಪಡಿಸುತ್ತಿದ್ದಾರೆ. ಕೊರೋನಾ ಭೀತಿಗೆ ಜನದಟ್ಟನೆ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಯಾವುದೇ ಸ್ಕ್ರೀನಿಂಗ್ ಟೆಸ್ಟ್ ಇಲ್ಲ.
ಗುರುಗೋಂವಿದ ನಾಯಕ
ಗ್ರಾಮೀಣ ಪ್ರದೇಶದ ನಾಗಕರಿಕ.
ಬಾಕ್ಸ್====
ಕೆಮ್ಮು, ನೆಗಡಿ, ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮೇಲೆ ನಿಗಾ ವಹಿಸಲಾಗಿದೆ. ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ, ಕೇಂದ್ರಿಯ ರೈಲ್ವೆ ಇಲಾಖೆಯ ಒಟ್ಟು 168 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಮಾರ್ಚ್ 20ರಿಂದ ಮಾರ್ಚ್ 31ರವರೆಗೆ ಈ ರೈಲುಗಳ ಸಂಚಾರವನ್ನು ಸೇವೆಯನ್ನು ನಿಲ್ಲಿಸಿವೆ ಎಂದು ಕೇಂದ್ರ ರೈಲ್ವೆ ಇಲಾಖೆ ಗುರುವಾರ ಘೋಷಿಸಿದೆ.
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ನೇರ ರಾಜ್ಯಕ್ಕೆ ಸಂಚರಿಸುವ ನಾಲ್ಕು ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳ್ಳಿಸಲಾಗಿದೆ.
ಬಾಕ್ಸ್====

ಅಔಗಿIಆ-19 ಏಕಾಏಕಿ ರೈಲ್ವೆ ಪ್ಲ್ಯಾಟ್‍ಫಾರ್ಮ್ ದರ ಏರಿಕೆ
ಬೆಳಗಾವಿ: ಅಔಗಿIಆ-19 ಏಕಾಏಕಿ ದೃಷ್ಟಿಯಿಂದ ಪ್ಲ್ಯಾಟ್‍ಫಾರ್ಮ್‍ಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು
ರಾಜ್ಯದ ಕೇಂದ್ರಿಯ ರೈಲ್ವೆ ನಿಲ್ದಾಣ ಹುಬ್ಬಳ್ಳಿ, ಬಳ್ಳಾರಿ ಹಾಗೂ ಬೆಳಗಾವಿ ರೈಲು ನಿಲ್ದಾಣದ ಪ್ಲ್ಯಾಟ್ ಫಾರ್ಮ ಟಿಕೆಟ್ ದರವನ್ನು ಏರಿಕೆಯಾಗಿದೆ.
ಮಹಾಮಾರಿ ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರೈಲ್ವೆ ಇಲಾಖೆ ಆದೇಶಿಸಿದೆ. ಮಾ. 31ರವರೆಗೆ 50 ರೂ ಗೆ ಹೆಚ್ಚಿಸಿದಲಾಗಿದ್ದು.
ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಹೊರತು ಪಡಿಸಿ, ಅನವಶ್ಯಕವಾಗಿ ಜನ ವಿಶ್ರಾಂತಿ ಪಡೆಯದಂತೆ ಸೂಚನೆ ನೀಡಿಲಾಗಿದೆ.
ಪ್ರಯಾಣಿಕರ ದೂರು :
ಕೊರೋನಾ ಜನರು ಮನೆ ಬಿಟ್ಟು ಬರುತ್ತಿಲ್ಲ, ರೈಲ್ವೆ ನಿಲ್ದಾಣದಲ್ಲಿ ಅತ್ಯವಶ್ಯಕ್ಕಾಗಿ ಬರುವ ಅಗತ್ಯವಿಲ್ಲ. ಜನದಟ್ಟಣೆಯ ನಿಯಂತ್ರ ಸದುದ್ದೇಶದಿಂದ ಅಧಿಕಾರಿಗಳು ಪ್ಲ್ಯಾಟಫಾರ್ಮ ಟಿಕೆಟ್ ದರವನ್ನು ಉದ್ದೇಶಪೂರ್ವಕವಾಗಿ ಏರಿಸಿದ್ದಾರೆ ಎಂದು ದೂರಿದರು.
**************-

loading...