ಚೀನಾನಂತರ ಕರೋನ ಸೋಂಕಿಗೆ ಇಟಲಿಯಲ್ಲಿ  3,405 ಜನರ ಬಲಿ

0
3

ರೋಮ್, -ಇಟಲಿಯಲ್ಲಿ ಕೇವಲ 24 ಗಂಟೆಗಳಲ್ಲಿ  ಕರೊನ ಸೋಂಕಿಗೆ  427ಮೃತಪಟ್ಟಿದ್ದು ,  ದೇಶದಲ್ಲಿ ಈವರೆಗೆ  ಮೃತರ ಸಂಖ್ಯೆ  3,405 ಕ್ಕೆ ಏರಿಕೆಯಾಗಿದೆ  ಎಂದು ನಾಗರಿಕ ಸಂರಕ್ಷಣಾ ಇಲಾಖೆ ಬಿಡುಗಡೆ ಮಾಡಿದ ಹೊಸ ಅಂಕಿ ಅಂಶಗಳು ತಿಳಿಸಿವೆ.
ಕಳದೆ ಫೆಬ್ರವರಿ 21 ರಂದು ಸಾಂಕ್ರಾಮಿಕ ರೋಗವು ತನ್ನ ಉತ್ತರದಲ್ಲಿ ಮೊದಲ ಬಾರಿಗೆ ಭುಗಿಲೆದ್ದ ನಂತರ ಇಟಲಿಯಲ್ಲಿ ಕರೋನವೈರಸ್ ಪ್ರಕರಣಗಳ ಒಟ್ಟು ಸಂಖ್ಯೆ 41,035 ಕ್ಕೆತಲುಪಿದೆ.ಚೀನಾದಷ್ಟೆ ತೀವ್ರವಾಗಿ  ಕರೋನ ದೇಶವನ್ನು ಕಾಡಿದ್ದು ದೇಶದಲ್ಲಿ  ಒಟ್ಟು 4,440 ಕರೋನ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು   ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ವೈರಸ್ ಸೋಂಕಿತರಲ್ಲಿ, 14,935 ಜನರು ಮನೆಯಲ್ಲೆ  ಪ್ರತ್ಯೇಕತೆವಾಗಿ ಚೇ ತರಿಸಿಕೊಳ್ಳುತ್ತಿದ್ದಾರೆ, ಇನ್ನೂ 15,757 ಜನರನ್ನು ರೋಗಲಕ್ಷಣಗಳಿಗಾಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸ ಕರೋನ  ಸಾವಿನ  ಸಂಖ್ಯೆಯಲ್ಲಿ ಏರಿಕೆಯಾಗಿ  ದೇಶದ   ಆರೋಗ್ಯ ಇಲಾಖೆ ಕೆಲಸವನ್ನು ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಸಹವರ್ತಿ ನಾಗರಿಕರ  ಸಾವಿಗಾಗಿ  ದುಃಖಿತರಾಗಿದ್ದೇವೆ ಎಂದೂ  ನಾಗರಿಕ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಏಂಜೆಲೊ ಬೊರೆಲ್ಲಿ ಗುರುವಾವಷ್ಟೆ ಹೇಳಿದ್ದರು.

loading...