ಪೆರುವಿನಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ

0
2

ಬ್ಯೂನಸ್ ಏರಿಸ್-  ಪೆರುವಿನಲ್ಲಿ ಕೊರೊನಾ ಸೋಂಕಿಗೆ 78 ವರ್ಷದ ವ್ಯಕ್ತಿ ಮೃತಪಟ್ಟಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ಗ್ರೀನ್ ವಿಚ್ ಕಾಲಮಾನ 10 ಗಂಟೆಗೆ ಕೊರೊನಾ ವೈರಾಣು ಸೋಂಕಿಗೆ ಮೊದಲ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.
ಉಸಿರಾಟದ ಸಮಸ್ಯೆಯ ಕಾರಣ ಮಂಗಳವಾರ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.
ಪೆರುವಿನಲ್ಲಿ ಈವರೆಗೆ ಕೊರೊನಾ ಸೋಂಕಿನ 234 ಪ್ರಕರಣಗಳು ದೃಢಪಟ್ಟಿವೆ ಎಂದು ಸಚಿವಾಲಯ ತಿಳಿಸಿದೆ

loading...