ಕೊರೋನಾ: ಡಿಸಿ ಆವರಣದಲ್ಲಿ ಸ್ಕ್ರೀನಿಂಗ್ ಟೆಸ್ಟ್

0
58

ಕೊರೋನಾ: ಡಿಸಿ ಆವರಣದಲ್ಲಿ ಸ್ಕ್ರೀನಿಂಗ್ ಟೆಸ್ಟ್
ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ದ್ವಾರದ ಬಳಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಯಿತು .

ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು , ಜಿಲ್ಲಾಧಿಕಾರಿ ಎಸ್ . ಬಿ . ಬೊಮ್ಮನಹಳ್ಳಿ , ಡಿಸಿಪಿ ಯಶೋಧಾ ವಂಟಗುಡಿ , ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ , ಹಿರಿಬಾಗೇಬಾಡಿ ಪಿಎಸ್‌ಐ ಎನ್ . ಎನ್ . ಅಂಬಿಗೇರ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಿ ಒಳಗಡೆಬಿಡಲಾಯಿತು . ಅಲ್ಲದೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಿವಿಧ ಇಲಾಖೆಗಳು , ಅಧಿಕಾರಿಗಳು ಹಾಗೂ ಡಿಸಿ ಕಚೇರಿ ಆವರಣದಲ್ಲಿರುವ ನ್ಯಾಯಾಲಯದ ವಕೀಲರು ಮತ್ತು ಸಾರ್ವಜನಿಕರಿಗೂಬಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಯಿತು .
ಇನ್ನು ಜಿಲ್ಲಾಧಿಕಾರಿ ಆವರಣಕ್ಕೆ ಕಾರುಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಯಿತು . ಇದಲ್ಲದೇ ಸಾರ್ವಜನಿಕರಿಗೂ ಕೂಡ ಪ್ರವೇಶ ನೀಡದೇ ಆವರಣದಲ್ಲಿಯೇ ಪತ್ರ / ಮನವಿಗಳ ಸ್ವೀಕೃತಿ ಕೇಂದ್ರ ಆರಂಭಿಸಿದ್ದು , ಅಲ್ಲಿಯೇ ಮನವಿ ಪತ್ರಗಳನ್ನು ತೆಗೆದುಕೊಂಡು ಕಳುಹಿಸುತ್ತಿದ್ದು , ಇನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬೆಳಿಗ್ಗೆಯಿಂದಲೇ ಕಚೇರಿಗೆ ಆಗಮಿಸುವ ಅಧಿಕಾರಿಗಳು , ಸಿಬ್ಬಂದಿಗಳು ಸಾರ್ವಜನಿಕರ ಪರೀಕ್ಷೆ ನಡೆಸಿದರು .
೦೨
**************-

loading...