ಬೀದಿಗೆ ಬಂದ ಜನರ ಮೇಲೆ ಲಘು ಲಾಠಿ ಪ್ರಹಾರ

0
122

ಬೀದಿಗೆ ಬಂದ ಜನರ ಮೇಲೆ ಲಘು ಲಾಠಿ ಪ್ರಹಾರ
ಬೆಳಗಾವಿ
ಕೊರೋನೊ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರಕಾರ ಕರ್ನಾಟಕ ಲಾಕಡೌನ್ ಮಾಡಿ‌ ಆದೇಶ ಹೊರಡಿಸಿದೆ. ಆದರೆ ಬೆಳಗಾವಿಯಲ್ಲಿ ಪರಿಸ್ಥಿತಿ ತಿಳಿದು ರಸ್ತೆಗೆ ಬಂದಿರುವ ಜನರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು.

 

ಸರ್ಕಾರದ ಸೂಚನೆಯಿದ್ದರು ಮಾರುಕಟ್ಟೆಯಲ್ಲಿ ಜನರು ಯುಗಾದಿ ಹಬ್ಬದ ಖರೀದಿಗೆ ಗುಂಪು ಗುಂಪಾಗಿ ಸೇರಿದ್ದ ಜನರನ್ನು ಚದುರಿಸಲು ಲಘುಲಾಠಿ ಪ್ರವಾಹ ನಡೆಸಿದರು.

ಬೆಳಗಾವಿಯ ಬಸ್ ನಿಲ್ದಾಣ, ಖಡೇಬಜಾರ, ಗಣಪತಿ ಗಲ್ಲಿಯಲ್ಲಿ ಲಾಠಿ ರುಚಿ ತೊರಿಸಿ ಜನರನ್ನ ಓಡಿಸುತ್ತಿರುವ ಪೊಲೀಸರು.

ಬೈಕ್ ಮೇಲೆ ಓರ್ವ, ಕಾರಿನಲ್ಲಿ ಇಬ್ಬರು ಮಾತ್ರ ಸಂಚರಿಸುವಂತೆ ಐಜಿಪಿ ಸೂಚನೆ ನೀಡಿದ್ದಾರೆ. ಅಲ್ಲದೆಮಾರುಕಟ್ಟೆ ಯಲ್ಲಿ ಜನರು ಸೇರದೇ ಇರೊಹಾಗೆ ನೋಡಿಕೊಳ್ಳವುದು ಸವಾಲಿನ ಕೆಲಸ.
ಸರ್ಕಾರದ ಆದೇಶಕ್ಕೆ ಆರೋಗ್ಯ ಕ್ಕೆ ಬೆಲೆ ಕೊಡದ ಜನರಿಗೆ ಲಘು ಲಾಠಿ ಪ್ರಹಾರ ನಡೆಸುವುದರ ಮೂಲಕ ಜನರಿಗೆ ಮನವರಿಕೆ ಮಾಡಿಕೊಟ್ಟರು.

loading...