ಲಾಕ್ಡೌನ್ ಆದೇಶದ ಉಲ್ಲಂಘನೆ ಕೊಪ್ಪಳ ಜಿಲ್ಲೆಯಲ್ಲಿ 25 ಪ್ರಕರಣ ದಾಖಲು

0
5

ಕೊಪ್ಪಳ :ಲಾಕ್ಡೌನ್ ಆದೇಶದ ಉಲ್ಲಂಘನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 25 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲೆಯ ಗಂಗಾವತಿ ನಗರ ಠಾಣೆಯಲ್ಲಿ 10, ಗಂಗಾವತಿ ಗ್ರಾಮಾಂತರ ಠಾಣೆ 02, ಕೊಪ್ಪಳ ನಗರ ಠಾಣೆ 02, ಕೊಪ್ಪಳ ಗ್ರಾಮಾಂತರ 01, ಕನಕಗಿರಿ ಠಾಣೆಯಲ್ಲಿ 05, ಕಾರಟಗಿ ಪೋಲಿಸ್ ಠಾಣೆ 03 ಮತ್ತು ತಾವರಗೇರಾ ಠಾಣೆಯಲ್ಲಿ 02 ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳಲ್ಲಿ ಒಟ್ಟು 31 ಜನರನ್ನು ಬಂಧಿಸಲಾಗಿದೆ.

ಜಿಲ್ಲೆಯಲ್ಲಿ ಲಾಕ್ಡೌನ್ ಆದೇಶವಾಗಿದ್ದರೂ ರಾಜಸ್ಥಾನ ಮತ್ತು ಮಧ್ಯಪ್ರದೇಶ ಮೂಲದ 174 ವಲಸೆ ಕಾರ್ಮಿಕರಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯವನ್ನು ಕಲ್ಪಿಸಲಾಗಿದೆ. ವಯೋವೃದ್ಧರು, ಭಿಕ್ಷುಕರು, ಅನಾಥ ಮತ್ತು ನಿರ್ಗತಿಕರನ್ನು ಒಳಗೊಂಡAತೆ ಸುಮಾರು 125 ಜನರಿಗೆ ಜಿಲ್ಲೆಯ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.

110 ಅನಾಥ, ನಿರ್ಗತಿಕರಿಗೆ ಆಹಾರ ಮತ್ತು ದಿನ ನಿತ್ಯದ ಅಗತ್ಯವಸ್ತುಗಳನ್ನು ಒದಗಿಸಲಾಗುತ್ತಿದೆ. ಕೊಪ್ಪಳದ ಗಾಂಧಿ ನಗರದಲ್ಲಿ ಪಡಿತರ ಚೀಟಿ ಹೊಂದಿಲ್ಲದಿರುವ 38 ಕುಟುಂಬಗಳ 190 ಜನರಿಗೆ ಮತ್ತು ಮದ್ಯಪ್ರದೇಶದ ನಿವಾಸಿಗಳಾದ ಲಾಕ್ಡೌನ್ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ವಾಸವಿರುವ 30 ಜನರಿಗೆ ಸಂಘ- ಸಂಸ್ಥೆಗಳ ನೆರವಿನಿಂದ ಅಗತ್ಯ ಆಹಾರ ಮತ್ತು ದಿನಬಳಕೆ ವಸ್ತುಗಳನ್ನು ಪೂರೈಸಲಾಗುತ್ತದೆ.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಆದ್ದರಿಂದ ಸಾರ್ವಜನಿಕರು ಯಾರೂ ಅನವಶ್ಯಕವಾಗಿ ಮನೆಯಿಂದ ಹೊರಬರದೆ ಇರುವುದರಿಂದ ಜಿಲ್ಲೆಯಲ್ಲಿ ಕೊರೊನಾವನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿರುವರು.

loading...