ಧಾರ್ಮಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ಆಚರಣೆ ಮಾಡಬಾರದು ಸಂಸದ ಸಂಗಣ್ಣ ಕರಡಿ ಮನವಿ

0
21

ಕೊಪ್ಪಳ : ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಆಚರಣೆಗೆ ಅವಕಾಶವಿಲ್ಲ. ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಸಂಸದ ಸಂಗಣ್ಣ ಕರಡಿ ಹೇಳಿದರು.

ಕೊರೊನಾ ಸೋಂಕಿನ ಕುರಿತು ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಬಗ್ಗೆ ಕುಷ್ಟಗಿ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಪ್ರತಿ ಗ್ರಾಮ ಪಂಚಾಯಿತಿಗೆ ಅಗತ್ಯ ಪ್ರಮಾಣದಲ್ಲಿ ಸೋಂಕು ನಿವಾರಕ ಔಷಧಿ ಸರಬರಾಜು ಮಾಡುವುದು, ಸ್ಯಾನಿಟೈಸರ್, ಮಾಸ್ಕ್, ಪೌರಕಾರ್ಮಿಕರಿಗೆ ಗೌನ್‌ ಸೇರಿ ರಕ್ಷಾ ಕವಚ ನೀಡುವುದು.

ತ್ಯಾಜ್ಯ ವಿಲೇವಾರಿ ಮಾಡುವ ವಾಹನವನ್ನು ನಿತ್ಯಸೋಂಕು ನಿವಾರದಕಿಂದ ಸ್ವಚ್ಛಗೊಳಿಸುವುದು. ಆಶಾ ಕಾರ್ಯಕರ್ತೆಯರಿಗೆ  ಅಗತ್ಯ ಸಾಮಗ್ರಿಗಳನ್ನು ವಿತರಿಸಬೇಕು. ಎಪಿಎಲ್‌, ಬಿಪಿಎಲ್‌ ಕಾರ್ಡ್ ಇಲ್ಲದ ಅನೇಕ ಜನರು ಇದ್ದು ಅವರನ್ನು ಗುರುತಿಸಿ ಆಹಾರ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳು ಸೇರಿದಂತೆ ತಾಲ್ಲೂಕಿಗೆ ಬೇರೆ ರಾಜ್ಯಗಳಿಂದ 941 ಹಾಗೂ ವಿವಿಧ ಜಿಲ್ಲೆಗಳಿಂದ 8142 ವಲಸಿಗರು ಬಂದಿದ್ದಾರೆ. ತಪಾಸಣೆ ನಡಸಲಾಗಿದ್ದು ಯಾರಲ್ಲಿಯೂ ಸೋಂಕಿನ ಲಕ್ಷಣಗಳು ಇಲ್ಲ. ವಲಸೆ ಬಂದಿರುವವರೆಲ್ಲ ಮನೆಯಲ್ಲಿ (ಹೋಂ ಕ್ವಾರಂಟೈನ್) ಇದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ: ವಿಜಯ ನಾಯಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ತಹಶೀಲ್ದಾರ್ ಎಂ.ಸಿದ್ದೇಶ್‌, ಕಾರ್ಯನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ,   ಜಿ.ಚಂದ್ರಶೇಖರ ಜಿ.ಪಂ.ಸದಸ್ಯ ಕೆ.ಮಹೇಶ್, ವಿಜಯ ನಾಯಕ.  ಮಹಾಂತೇಶ ಬದಾಮಿ.  ಅಶೋಕ ಪಾಟೀಲ, ಮಹಾದೇವ ನಾಯಕ,  ರಜನಿಕಾಂತ ಕೆಂಗಾರಿ,  ಅರುಣಕುಮಾರ ಪಾಟೀಲ ಇತರರು  ಇದ್ದರು.

ನಿರಾಶ್ರಿತರ ಕೇಂದ್ರಕ್ಕೆ ಭೇಟಿ: ಉತ್ತರ ಭಾರತದ ವಲಸೆ ಕಾರ್ಮಿಕರು ಇರುವ ನಿರಾಶ್ರಿತರ ಕೇಂದ್ರ ಹಾಗೂ  ಕೊರೊನಾ ಸೋಂಕು ನಿವಾರಣೆ ಚಿಕಿತ್ಸೆ ಸೌಲಭ್ಯ ಒದಗಿಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿರುವ ಕಟ್ಟಡಗಳಿಗೆ ಸಂಸದ ಸಂಗಣ್ಣ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

loading...