ಅಸ್ಸಾಂನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 25ಕ್ಕೇರಿಕೆ

0
13

ಗುವಾಹಟಿ:- ಅಸ್ಸಾಂನಲ್ಲಿ ಕೋವಿಡ್‌ 19 ಸೋಂಕಿನ ಒಂದು ಹೊಸ ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 25 ಕ್ಕೆ ಏರಿದೆ.

ಹೊಸ ಸೋಂಕಿನ ಪ್ರಕರಣ ಉತ್ತರ ಲಖಿಂಪುರ ಜಿಲ್ಲೆಯಿಂದ ವರದಿಯಾಗಿದೆ. ಸೋಂಕಿತ ವ್ಯಕ್ತಿಯು ನಿಜಾಮುದ್ದೀನ್ ಮರ್ಕಜ್‌ಗೆ ಭೇಟಿ ನೀಡಿದ್ದರು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ನಿಜಾಮುದ್ದೀನ್ ಮರ್ಕಜ್‌ನಿಂದ ಹಿಂದಿರುಗಿದವರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಗಳು ಇಂದು ಸಂಜೆ ದೊರೆಯುವ ಸಾಧ್ಯತೆ ಇದೆ.
ನಿನ್ನೆ, ಎಂಟು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ನಿಜಾಮುದ್ದೀನ್ ಮರ್ಕಜ್ ಘಟನೆಗೆ ಸಂಬಂಧವಿಲ್ಲದ ಏಕೈಕ ಪ್ರಕರಣವು ಕಮ್ರೂಪ್ (ಮೆಟ್ರೋ) ಜಿಲ್ಲೆಯ ಗುವಾಹಟಿಯಲ್ಲಿ ಕಂಡುಬಂದಿದೆ. ಗೋಲಘಾಟ್ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

loading...