ರಾಜ್ಯದಲ್ಲಿ ಕರೋನವೈರಸ್‍ ನಿಂದ ಸಾವನ್ನಪ್ಪಿದವರ ಸಂಖ್ಯೆ 4 ಕ್ಕೆ ಏರಿಕೆ

0
15

ಬಾಗಲಕೋಟೆ:- ಕಳೆದ ರಾತ್ರಿ ಇಲ್ಲಿನ 75 ವರ್ಷದ ವ್ಯಕ್ತಿಯೊಬ್ಬರು ಕೊರೊನವೈರಸ್‍ನಿಂದ ಸಾವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ.

ಕಳೆದ ವಾರ ಸೋಂಕು ದೃಢಪಟ್ಟಿದ್ದ ವ್ಯಕ್ತಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿತ್ತು. ಆದರೆ ಅವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕೃತ ಮೂಲಗಳು ಯುಎನ್‌ಐಗೆ ತಿಳಿಸಿವೆ.
ನತದೃಷ್ಟ ವ್ಯಕ್ತಿ ಪಟ್ಟಣದಲ್ಲಿ ಅಡುಗೆ ಎಣ್ಣೆ ಮತ್ತು ದಿನಸಿ ಮಾರುವ ಸಣ್ಣ ಅಂಗಡಿಯೊಂದನ್ನು ಹೊಂದಿದ್ದರು. ಆದರೆ, ವ್ಯಕ್ತಿ ಹೊರಗೆ ಪ್ರಯಾಣ ಬೆಳೆಸಿದ ಇತಿಹಾಸವನ್ನು ಹೊಂದಿರಲಿಲ್ಲ.
ಆದರೆ,ಅವರ ಮಗ ಮತ್ತು ಮಗಳು ಇತ್ತೀಚೆಗೆ ಬೆಂಗಳೂರಿನಿಂದ ಅವರನ್ನು ನೋಡಲು ಬಂದಿದ್ದರು ಎಂದು ಹೇಳಲಾಗಿದೆ.

loading...