ಕುಡಚಿ ಪುರಸಭೆ ವ್ಯಾಪ್ತಿಯಲ್ಲಿ ಅಗ್ನಿಶಾಮಕ ದಳ ಔಷಧಿ ಸಿಂಪಡಿಸಿ ಕೂರೋನಾ ಜಾಗೃತಿ

0
11

ಕುಡಚಿ:ಪುರಸಭೆ ಆವರಣದಲ್ಲಿ ಔಷಧಿ ಸಿಂಪಡಿಸುವ ಮೂಲಕ ಮುಖ್ಯಾಧಿಕಾರಿ ಎಸ.ಎ.ಮಹಾಜನ , ಉಪ ತಹಶೀಲ್ದಾರ್ ಐ.ಕೆ. ಹಿರೇಮಠ ಚಾಲನೆ ನೀಡಿದರು.

ಪಟ್ಟಣದ ಪ್ರಮುಖ ರಸ್ತೆಗಳಾದ ದರ್ಗಾ ರಸ್ತೆ, ಬಜಾರ ರಸ್ತೆ, ರೈಲು ನಿಲ್ದಾಣ ರಸ್ತೆಗಳಲ್ಲಿ , ಪ್ರಮುಖ ಸಾರ್ವಜನಿಕ ಕಟ್ಟಡಗಳಾದ ಪುರಸಭೆ, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ರೆಲು ನಿಲ್ದಾಣ, ಬಸ್ ನಿಲ್ದಾಣದ ಆವರಣದಲ್ಲಿ ಕೂರೋನಾ ವೈರಸ್ ನಿಯಂತ್ರಣಕ್ಕಾಗಿ ರಾಯಬಾಗ ಅಗ್ನಿಶಾಮಕ ದಳ ಹಾಗೂ ಪುರಸಭೆ ಸಿಬ್ಬಂದಿಯವರು ಔಷಧಿಯನ್ನು ಸಿಂಪಡಿಸಿದರು.

ಭಾರತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಕರೆ ನೀಡಿದಂತೆ ಕರೋನಾ ವೈರಸ್ ರೋಗದ ನಿಯಂತ್ರಣಕ್ಕಾಗಿ ಪಟ್ಟಣದ ಸಮಸ್ತ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಔಷಧಿಯನ್ನು ಸಿಂಪಡಿಸಲಾಗುತ್ತಿದ್ದು
ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿಯೇ ಇರುವುದರೂಂದಿಗೆ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಪುರಸಭೆಯೂಂದಿಗೆ ಸಹಕರಿಸಬೇಕು ಎಂದು ಮಹಾಜನ ತಿಳಿಸಿದರು.

ಈ ಸಮಯದಲ್ಲಿ ರಾಯಬಾಗ ಅಗ್ನಿಶಾಮಕ ಸಂಭಾಜೆ, ಅಗ್ನಿಶಾಮಕ ದಳ ಹಾಗೂ ಪುರಸಭೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

loading...