ಗೋಪಾಲಯ್ಯಗಿಂತ ಮೊದಲು ಮಂತ್ರಿಯಾಗಿದ್ದ ತಮಗೆ ವ್ಯವಸ್ಥೆಯ ಬಗ್ಗೆ ಚೆನ್ನಾಗಿ ಗೊತ್ತಿದೆ: ಡಿಕೆಶಿ

0
8

ಬೆಂಗಳೂರು:- ಅಕ್ಕಿ ದಾಸ್ತಾನು ಅಕ್ರಮ ಆರೋಪ ವಿಚಾರದಲ್ಲಿ ಆಹಾರ ಮತ್ತು ನಾಗರೀಕ ಸಚಿವ ಗೋಪಾಲಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೆ ತಿವಿದಿದ್ದಾರೆ.
ಗೋಪಾಲಯ್ಯಗಿಂತ ಮೊದಲು ಮಂತ್ರಿ ಆಗಿದ್ದ ತಮಗೆ ಸರ್ಕಾರ ಹೇಗೆ ನಡೆಯುತ್ತದೆ? ವ್ಯವಸ್ಥೆ ಹೇಗಿರುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ದಾಸ್ತಾನು ಇರಿಸಿದ್ದ ಅಕ್ಕಿ ಎನ್ನುವ ಗೋಪಾಲಯ್ಯ ಮೊದಲೇ ಏಕೆ ದಾಸ್ತಾನು ಇರಿಸಿದ್ದ ಬಗ್ಗೆ ಘೋಷಣೆ ಮಾಡಿಲ್ಲ. ತಮಗೆಲ್ಲವೂ ಗೊತ್ತಿದೆ ಎಂದರು.
ಮಂಡ್ಯದಲ್ಲಿ ಪತ್ರಕರ್ತರ ಮೇಲೆ ಮೇಲ್ಮನೆ ಸದಸ್ಯ ಶ್ರೀಕಂಠೇಗೌಡರ ದಾದಾಗಿರಿ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ಮಾಧ್ಯಮದವರಿಗೊಂದು ಸರ್ಕಾರದವರಿಗೊಂದು ನಿಯಮ ಮಾಡಬೇಡಿ. ಭರತ್ ಶೆಟ್ಟಿಗೊಂದು ನ್ಯಾಯ, ರೇಣುಕಾಚಾರ್ಯಗೆ ಒಂದು, ಶ್ರೀಕಂಠೆಗೌಡರಿಗೊಂದು ನ್ಯಾಯ ಬೇಡ. ಎಲ್ಲರನ್ನು ಸರ್ಕಾರ ಒಂದೇ ರೀತಿ ನೋಡಲಿ. ಯಾರೇ ತಪ್ಪು ಮಾಡಿದರೂ ಕ್ರಮ ಜರುಗಿಸಲಿ. ನಮ್ಮವರು, ಅವರ ಕಡೆಯವರು ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿ ಎಂದು ಮಾರ್ಮಿಕವಾಗಿ ನುಡಿದರು.

loading...