ಬಡ ಜನರ ನೆರವಿಗೆ ನಿಂತ ವಂಟಮುತ್ತೆ ಪರಿವಾರ ೬೦೦ ಕುಟುಂಬಗಳಿಗೆ ದಿನಸಿ ವಿತರಣೆ

0
22

ಬಡ ಜನರ ನೆರವಿಗೆ ನಿಂತ ವಂಟಮುತ್ತೆ ಪರಿವಾರ
೬೦೦ ಕುಟುಂಬಗಳಿಗೆ ದಿನಸಿ ವಿತರಣೆ

ಕನ್ನಡಮ್ಮ ಸುದ್ದಿ – ಚಿಕ್ಕೋಡಿ: ಕೊರೋನಾ ಲಾಕ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಆಟೋ ಚಾಲಕರು ಹಾಗೂ ಬಿಹಾರಿ ಕಾರ್ಮಿಕರಿಗೆ ಚಿಕ್ಕೋಡಿ ಪಟ್ಟಣದ ಸಮಾಜ ಸೇವಕ ಪ್ರಕಾಶ ವಂಟಮುತ್ತೆ ಕುಟುಂಬ ಬಡ ಜನರ ನೆರೆವಿಗೆ ನಿಂತು ಮಾನವೀಯ ಮೆರೆದಿದೆ .

ಚಿಕ್ಕೋಡಿ ಪಟ್ಟಣದ ಪ್ರಕಾಶ ವಂಟಮತ್ತೆ ಎಂಬುವರು 600 ಬಡ ಕುಟುಂಬಗಳು ಹಾಗೂ ಬಿಹಾರಿ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸಿ ಮಾದರಿಯಾಗಿದ್ದಾರೆ. ತರಕಾರಿ, ಬ್ರೆಡ್,ಮಸಾಲೆ ಪದಾರ್ಥಗಳು, ಅಡುಗೆ ಎಣ್ಣೆ, ಸಕ್ಕರೆ, ಬೇಳೆ, ಚಹಾ ಪುಡಿ ಸೇರಿದಂತೆ ದಿನನಿತ್ಯ ಆಹಾರಕ್ಕೆ ಬಳಿಸುವ ಸಾಮಗ್ರಿಗಳನ್ನ ನೀಡಿದ್ದಾರೆ. ಸರಕಾರ ಅಕ್ಕಿ ನೀಡಿದೆ, ಚಿಕ್ಕೋಡಿ ಶಾಸಕರು ಜೋಳ ಹಾಗೂ ಬೇಳೆ ಕಾಳು ಕೊಟ್ಟಿರುವ ಕಾರಣ ಈ ಸಮಾಜ ಸೇವಕ ಆಹಾರ ತಯಾರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನ ನೀಡಿ ಮಾದರಿಯಾಗಿದ್ದಾರೆ.

ಇನ್ನು ವಿಶೇಷವೆಂದರೆ ಚಿಕ್ಕೋಡಿ ಪಟ್ಟಣದಲ್ಲಿ ನಡೆಯುತಿರುವ ಒಳ ಚರಂಡಿ ಕಾಮಗಾರಿಗೆ ಆಗಮಿಸಿ ಲಾಕ್ ಡೌನತ ಸಂಕಷ್ಟದಲ್ಲಿರುವ ಬಿಹಾರಿ ಕಾರ್ಮಿಕರ ಶೆಡಗಳಿಗೆ ತೆರಳಿ ಆಹಾರ ಸಾಮಗ್ರಿ ವಿತರಿಸಿದ್ದಾರೆ.

ಈ ವೇಳೆ ಮಾತನಾಡಿದ ಪ್ರಕಾಶ ವಂಟಮುತ್ತೆ ಚಿಕ್ಕೋಡಿ ಪಟ್ಟಣದಲ್ಲಿ ಬಡ ಕುಟುಂಬಗಳ ಯಾರಿಗೂ ದಿನಸಿ ಸಾಮಗ್ರಿಯ ಸಮಸ್ಯೆ ಇದ್ದರೆ ನಮಗೆ ದೂರವಾಣಿ ಕರೆ ಮಾಡಿದರೇ ನಾವು ಅವರಿಗೆ ಆಹಾರ ಸಾಮಗ್ರಿ ತಲುಪಿಸುತ್ತೇವೆ ಎಂದು ಹೇಳಿದ್ದಾರೆ .

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೊಹಿತೆ ಸೇರಿದಂತೆ ಇತರರು ಇದ್ದರು .

loading...