ಕಾರ್ಮಿಕ‌ ದಿನದ ಶುಭ ಕೋರಿದ ಮುಖ್ಯಮಂತ್ರಿ

0
48

ಬೆಂಗಳೂರು:- ಇಂದು ವಿಶ್ವ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ಶುಭಕೋರಿದ್ದಾರೆ.

“ಬದುಕಿನುದ್ದಕ್ಕೂ ದುಡಿಮೆಯನ್ನೇ ದೇವರೆಂದು ಭಾವಿಸಿ ದೇಶ ನಿರ್ಮಾಣಕ್ಕೆ ಬೆವರು ಸುರಿಸಿ ದುಡಿಯುವ ಕಾರ್ಮಿಕ ಶಕ್ತಿಯೇ ದೇಶದ ಶಕ್ತಿ”. ಕೊರೊನಾದ ಸಂಕಷ್ಟದ ದಿನಗಳು ಕಳೆದು ನೆಮ್ಮದಿಯ ದಿನಗಳು ಬೇಗ ಬರಲಿ ಎಂದು ಆಶಿಸೋಣ ಎಂಬುದಾಗಿ ಯಡಿಯೂರಪ್ಪ ಕೋರಿದ್ದಾರೆ.

ಇನ್ನು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, “ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸುಭದ್ರ ಭಾರತ ನಿರ್ಮಿಸಿರುವ ಎಲ್ಲಾ ಶ್ರಮಿಕರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸುವ ಜೊತೆಗೆ ನಿಮ್ಮ ಆರೋಗ್ಯದ ಕಡೆಗೂ ಗಮನಕೊಡಿ ಎಂದು ಸಚಿವರು ಈ ಮೂಲಕ ವಿನಂತಿಸಿಕೊಂಡಿದ್ದಾರೆ.

loading...