ರಾಯಬಾಗದಲ್ಲಿ ಮತ್ತೆ ಮೂವರಲ್ಲಿ  ಕೊರೊನ ಕೆಸ್ ಪತ್ತೆ : ಹೆಚ್ಚಿದ ಆತಂಕ

0
83

ರಾಯಬಾಗದಲ್ಲಿ ಮತ್ತೆ ಮೂವರಲ್ಲಿ  ಕೊರೊನ ಕೆಸ್ ಪತ್ತೆ : ಹೆಚ್ಚಿದ ಆತಂಕ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ-ಇಂದು ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆ ಯಾಗಿದೆ. ಈ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಮೂರು  ಪಾಸಿಟಿವ್ ಕೇಸ್ ಪತ್ತೆಯಾಗದ್ದು ,ಈ ಮೂಲಕ ಕುಡಚಿ ಪಟ್ಟಣದಲ್ಲಿ ಸೊಂಕಿತರ ಸಂಖ್ಯೆ ೨೧ಕ್ಕೆ ಏರಿಕೆಯಾಗಿದೆ .

ಬೆಳಗಾವಿ ಜಿಲ್ಲೆಯ ರಾಯಬಾಗ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 70 ರ ಗಡಿ ದಾಟಿ 72 ಕ್ಕೇರಿದ್ದು ಜನರಲ್ಲಿ ಇನಷ್ಟು ಆತಂಕಕ್ಕೆ ಕಾರಣವಾಗಿದೆ.

ಗುರುವಾರ ಒಂದೇ ದಿನ ಹದಿನಾಲ್ಕು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದವು ಇಂದು ಶುಕ್ರವಾರದ ಬೆಳಗಿನ ಬುಲಿಟೀನ್ ಮತ್ತೆ  ಜಿಲ್ಲೆಗೆ ಶಾಕ್ ನೀಡಿದೆ .

ಬೆಳಗಾವಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 72 ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.ಅದರಲ್ಲಿ 10 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಒಬ್ಬ ವೃದ್ದ ಮಹಿಳೆ ಮೃತಪಟ್ಟಿದ್ದಾಳೆ.

loading...