ಗೋವಾದಲ್ಲಿರುವ ಕನ್ನಡಿಗರಿಗೆ ದಿನಸಿ ಪೂರೈಸಿದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ

0
888

ಗೋವಾದಲ್ಲಿರುವ ಕನ್ನಡಿಗರಿಗೆ ದಿನಸಿ ಪೂರೈಸಿದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ

ಕನ್ನಡಮ್ಮ ಸುದ್ದಿ -ಯಮಕನಮರಡಿ : ಕೊರೊನ ಲಾಕ್ ಡೌನ ಹಿನ್ನಲೆ ದುಡಿಯಲು ಕೆಲಸವಿಲ್ಲದೆ ಗೋವಾದಲ್ಲಿ ತೊಂದರೆ ಅನುಭವಿಸುತ್ತಿರುವ ಕನ್ನಡಿಗರ ಸಹಾಯಕ್ಕೆ ಯಮಕನಮರಡಿ ಶಾಸಕ ಸತೀಶ ಜಾರಕಿಹೋಳಿ ನಿಂತಿದ್ದಾರೆ . ಗೋವಾದಲ್ಲಿ ಕೆಲಸಕ್ಕೆ ತೆರಳಿದ್ದ ಯಮಕನಮರಡಿ ಕ್ಷೇತ್ರದ ಚಿಕ್ಕಾಲಗುಡ್ಡ ಗ್ರಾಮದ ನೂರಾರು ಜನರಿಗೆ ಸಹಾಯ ಮಾಡಿ ಇನ್ನುಳಿದ ಶಾಸಕರಿಗೆ ಮಾದರಿಯಾಗಿದ್ದಾರೆ .

ಗೋವಾದಲ್ಲಿ ನೆಲೆಸಿರುವ ಯಮಕನಮರಡಿ ಕ್ಷೇತ್ರದ ಚಿಕ್ಕಾಲಗುಡ್ಡ ಗ್ರಾಮದ ಸುಮಾರು ಮೂವತ್ತು ಕುಟುಂಬಗಳಿಗೆ ಅಗತ್ಯ ವಸ್ತುಗಳ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಈ ವಿಷಯವನ್ನು ಚಿಕ್ಕಾಲಗುಡ್ಡ ಗ್ರಾಮಸ್ಥರು ಶಾಸಕ ಸತೀಶ ಜಾರಕಿಹೋಳಿ ಅವರಿಗೆ ತಿಳಿಸಿದ್ದಾರೆ . ವಿಷಯ ತಿಳಿದ ಸತೀಶ ಜಾರಕಿಹೋಳಿ ತಕ್ಷಣ ಅಲ್ಲಿಯೇ ದಿನಸಿ ಖರೀದಿಸಿ ತೊಂದರೆಯಲ್ಲಿರುವ ಕನ್ನಡಿಗರಿಗೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ .

ಅಗತ್ಯ ವಸ್ತುಗಳಾದ ದಿನಸಿಗಳ ಕಿಟ್ ಗಳನ್ನ ಕನ್ನಡಿಗರಿಗೆ ಮುಟ್ಟಿಸಲಾಗುತ್ತಿದೆ‌ .ಕಷ್ಟದಲ್ಲಿರುವ ತನ್ನ ಕ್ಷೇತ್ರದ ಜನರು ಎಲ್ಲಿಯೇ ಇದ್ದರು ಅವರ ಕಷ್ಟಕ್ಕೆ ಸ್ಪಂಧಿಸಿರುವ ಶಾಸಕ ಸತೀಶ ಜಾರಕಿಹೋಳಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ .

loading...