ಆಪತ್ತು ತಂದು ಅಜ್ಮೀರ ಪ್ರವಾಸ ಪೋಲಿಸರ ಸಮಯ ಪ್ರಜ್ಞೆ : ತಪ್ಪಿದ ಭಾರಿ ಪ್ರಮಾಣದ ಅನಾಹುತ

0
43

ಆಪತ್ತು ತಂದು ಅಜ್ಮೀರ ಪ್ರವಾಸ
ಪೋಲಿಸರ ಸಮಯ ಪ್ರಜ್ಞೆ : ತಪ್ಪಿದ ಭಾರಿ ಪ್ರಮಾಣದ ಅನಾಹುತ

ಕನ್ನಡಮ್ಮ ವಿಶೇಷ

ಬೆಳಗಾವಿ/ಸಂಕೇಶ್ವರ:ಕರ್ನಾಟಕಕ್ಕೆ ಕೊರೋನ ಕಂಟಕ ಮುಂದುವರೆದಿದ್ದು ,ತಬ್ಲಿಘಿಗಳ ನಂಟಿನ ಬಳಿಕ ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್ ರಾಜಸ್ಥಾನದ ಅಜ್ಮೀರದಿಂದ ಪೊಲೀಸರ ಕಣ್ಣು ತಪ್ಪಿಸಿ ಬಂದು ಕರ್ನಾಟಕ ಗಡಿಯಲ್ಲಿ ಸಿಕ್ಕಿಬಿದ್ದ 38 ಜನರ ಗುಂಪಿನಲ್ಲಿ 30 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಗಡಿಯಲ್ಲಿ ಇವರನ್ನು ತಡೆದ ಕರ್ನಾಟಕ ಪೊಲೀಸರಿಂದಾಗಿ ಆಗಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ.

ಕರ್ನಾಟಕವನ್ನು ಕಾಡುತ್ತಿರುವ ತಬ್ಲಿಘಿಗಳ ಬಳಿಕ ಇಂದು ಅಜ್ಮೀರ ಪ್ರವಾಸದಿಂದ ಬಂದವರಲ್ಲಿ ಸೊಂಕು ಕಾಣಿಸಿಕೊಂಡಿದೆ .ದೆಹಲಿಯ ನಿಜಾಮುದ್ದಿನ್ ಜಮಾತ್ ಮರ್ಕಜ್ ದಿಂದ ನೇರವಾಗಿ ಅಜ್ಮೀರ ದರ್ಗಾಕ್ಕೆ‌ ಹೋಗಿದ್ದ ಈ 38 ಜನರು ಬಸ್ ಮೂಲಕ ಪಾಸ್ ಸಹಾಯದಿಂದ ಕೊಲ್ಲಾಪುರವರೆಗೆ ಬಂದಿದ್ದಾರೆ. ಆದರೆ ಅಲ್ಲಿಂದ ಮಹಾರಾಷ್ಟ್ರ ಗಡಿ ದಾಟಿ ಬರುವಾಗ ಕರ್ನಾಟಕರ್ನಾಟಕ ಪೊಲೀಸರು ತಡೆ ಹಿಡಿದಿದ್ದಾರೆ .ತಾವು ವಾಪಸ್ಸು ಹೋಗುವುದಾಗಿ ಹೇಳಿ ಕಳ್ಳ ದಾರಿ ಮೂಲಕ ಒಂದೆರಡು ದಿನ ಅಲ್ಲಿಯೇ ಕಾಲ ಕಳೆದು ಕಾಲ್ನಡಿಗೆ ಮೂಲಕ ಬರುವಾಗ ನಿಪ್ಪಾಣಿ ಬಳಿ ಸಿಕ್ಕಿ ಬಿದ್ದಿದ್ದಾರೆ.ಕರ್ನಾಟಕ ಪೋಲಿಸರ ಸಮಯ ಪ್ರಜ್ಞೆಯಿಂದ ಅಜ್ಮೀರ ಪ್ರವಾಸದಿಂದ ಬಂದವರು ಸಿಕ್ಕಿದ್ದಾರೆ .

ಕೂಡಲೇ ಎಚ್ಚತುಕೊಂಡ ಜಿಲ್ಲಾಡಳಿತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಈ ಎಲ್ಲರನ್ನೂ ನಿಪ್ಪಾಣಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಎಲ್ಲರ ಗಂಟಲು ದ್ರವ ತಪಾಸಣೆ ನಡೆಸಿದಾಗ ಇದರಲ್ಲಿ 30 ಜನರಿಗೆ ಸೋಂಕು ತಗುಲಿರುವುದು ಇಂದು ದೃಢವಾಗಿದೆ .ಪರಿಣಾಮ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿಯ ೨೨ ಜನರು ಚಿಕ್ಕೋಡಿ ,ಹುಕ್ಕೇರಿ ,ಸಂಕೇಶ್ವರ ಭಾಗದವರು ಎಂದು ಹೇಳಲಾಗುತ್ತಿದೆ .ಕ್ವಾರಂಟೈನ್ ಸಮಯದಲ್ಲಿ ಅಲ್ಲಿಗೆ ಹೋಗಿ ಕುಟುಂಬಸ್ಥರು ಅವರಿಗೆ ಭೇಟಿಯಾಗಿ ಬಂದಿದ್ದು ಅವರನ್ನು ಸಹ ಕ್ವಾರಂಟೈನ್ ಮಾಡಲಾಗುತ್ತಿದೆ ‌,ಇದು ಕೂಡ ಇನಷ್ಟು ಆತಂಕಕ್ಕೆ ಕಾರಣವಾಗಿದೆ .

ನಾಲ್ಕು ರಾಜ್ಯದವರನ್ನು ಕಣ್ಣ ತಪ್ಪಿಸಿ ಈ ಸೊಂಕಿತರು ಹೇಗೆ ಕರ್ನಾಟಕದ ಕಡೆ ಬಂದರು ಎಂಬುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.ಜೊತೆಗೆ ರಾಜ್ಯಸ್ತಾನ ಸರಕಾರ ಇವರನ್ನು ಹೇಗೆ ಕಳುಹಿಸಿ ಕೊಟ್ಟರು ? ಇವರ ಬಳಿ ಇರುವ ಪರವಾನಿಗೆ ಬಗ್ಗೆಯು ಹಲವು ಗೊಂದಲ ಮೂಡಿದೆ ‌.ಒಂದು ವೇಳೆ ಪೊಲೀಸರ ಕಣ್ಣು ತಪ್ಪಿಸಿ ಎಲ್ಲರೂ ಅವರವರ ಮನೆಗೆ ಹೋಗಿದ್ದರೆ ಮುಂದೆ ಮಹಾ ಮಾರಿ ಕೋವಿಡ್-19 ಸೋಂಕು ಸಮುದಾಯ ಮಟ್ಟದಲ್ಲಿ ವ್ಯಾಪಿಸುವ ಸಾಧ್ಯತೆ ಇತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಅವರನ್ನ ಕ್ವಾರಂಟೈನ್ ಮಾಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ .

loading...