ಮೃತ ಕುಟುಂಬಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಾಂತ್ವನ

0
14

ಗಾಳಿ, ಮಳೆಗೆ ಕುರಿಗಾಯುವುವರಿಬ್ಬರು ದಾರುಣ ಸಾವು
ಬೆಳಗಾವಿ: ಮಳೆ ಆವಾತಂರದಿಂದ ಭಾನುವಾರ ಮಧ್ಯಾಹ್ನ ಕಮಕಾರಟ್ಟಿ (ಬೆಳಗಾವಿ ತಾಲ್ಲೂಕು) ನಲ್ಗೋಡೆ ಕುಸಿತಗೊಂಡು ಇಬ್ಬರು ದಾರುಣ ಸಾವನಪ್ಪಿದ್ದಾರೆ.
ಕೊಂಡಸಕೊಪ್ಪ ನಿವಾಸಿ, ಕಲ್ಲಪ್ಪ ಸಿದ್ದಪ್ಪ ಸಾಂಬ್ರೆಕರ್ (45), ಶಿಂದೋಳಿ ನಿವಾಸಿ ಪರಶುರಾಮ ಗಂಗಪ್ಪ ಶಹಾಪುರ್ಕರ್ (17) ಮೃತ ದುರ್ದೈವಿಗಳು.


ಈ ಇಬ್ಬರ ವ್ಯಕ್ತಿಗಳು ಕುರಿ ಮೇಯಿಸಲು ಪಕ್ಕದ ಕಮಕರಟ್ಟಿ ಗ್ರಾಮದೂರಿಗೆ ತೆರಳಿದ್ದರು. ಮದ್ಯಾಹ್ನ ಸಮಯದಲ್ಲಿ ಬಿರುಸಿನ ಗಾಳಿ, ಮಳೆಯಿಂದ ರಕ್ಷಿಸಿಕೊಳ್ಳಲು ಕುರಿಗಳನ್ನು ಬಿಟ್ಟು, ಹತ್ತಿರದ ಶೆಡ್‍ಗೆ ಹೋಗಿದ್ದರು, ಜೋರಾದ ಗಾಳಿಗೆ ಪತ್ರಾಸ್ ಹಾಗೂ ಗೋಡೆ ಕುಸಿತಗೊಂಡಿದ್ದರಿಂದ ಗೋಡೆ ಮದ್ಯದಲ್ಲಿ ಸಿಲುಕಿ ಇಬ್ಬರು ಪ್ರಾಣಬಿಟ್ಟಿದ್ದಾರೆ.
ಬಳಿಕ ಘಟನಾ ಸ್ಥಳಕ್ಕೆ ಆಗಮಿಸದ ವ್ಯಾಪ್ತಿಯ ಕುರಿಗಾಯುವವರು ಸಂಬಂಧಿಕರ ಹಾಗೂ ಪೊಲೀಸ್‍ರ ಮಾಹಿತಿ ತಿಳಿಸಿದರು. ಇದಾದ ಬಳಿಕ ಹಿರೇಬಾಗೇವಾಡಿ ಪೆÇಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೆÇಲೀಸ್ ಇನ್ಸ್‍ಪೆಕ್ಟರ್ ಎನ್. ಎನ್. ಅಂಬಿಗೇರ್ ಹೆಚ್ಚಿನ ತನಿಖೆ ನಡೆಸುವದಾಗಿ ತಿಳಿಸಿದ್ದಾರೆ.

ಬಾಕ್ಸ್===
ಮೃತ ಕುಟುಂಬಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಾಂತ್ವನ
ಅಕಾಲಿಕ ಮಳೆಗೆ ಪ್ರಾಣಕಳೆದುಕೊಂಡ ಕುರಿಗಾಯು ಕುಟುಂಬಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬೇಟಿ ನೀಡಿ ಸಾಂತ್ವನ ಹೇಳುವ ಮೂಲಕ ಮೃತ ಕುಟುಂಗಳಿಗೆ ಧನ ಸಹಾಯ ಮಾಡಿದ್ದಾರೆ.
ಸರಕಾರದಿಂದ ಇನ್ನೂ ಹೆಚ್ಚಿನ ಆರ್ಥಿಕ ಸಹಾಯ ಕಲ್ಪಿಸುವಂತೆ ಸರಕಾರಕ್ಕೆ ಮನವಿಮಾಡಿಕೊಳ್ಳುವುದಾಗಿ ಮೃತ ಕುಟುಂಬಗಳಿಗೆ ಭರವಸೆ ನೀಡಿದರು.

01

***************-

loading...