ಜಲ್ಲಿ ಕಲ್ಲು ಸಾಗಾಟಕ್ಕೆ ಗ್ರಾಮಸ್ಥರು ಆಕ್ರೋಶ

0
32

ಜಲ್ಲಿ ಕಲ್ಲು ಸಾಗಾಟಕ್ಕೆ ಗ್ರಾಮಸ್ಥರು ಆಕ್ರೋಶ
ಅನುಮತಿಯಿಲ್ಲದಕ್ಕೆ ೧೫ ಲಾರಿಗಳಿಗೆ ತಡೆ
ಬೆಳಗಾವಿ: ನಿಯಮಬಾಹಿರವಾಗಿ ಜಲ್ಲಿ ಕಲ್ಲು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಗ್ರಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ ನೇತೃತ್ವದಲ್ಲಿ ತಡೆದು ನಾವಲಗಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿನ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ಉತ್ಪಾದನೆ ಮಾಡಲಾದ ಜಲ್ಲಿಕಲ್ಲು ತುಂಬಿದ ಲಾರಿಗಳು ಯಾವುದೇ ಅನುಮತಿ ಪತ್ರ ಇಲ್ಲದೇ ಮತ್ತು ಹೆಚ್ಚಿನ ಭಾರ ಹೊತ್ತು ಹಗಲು ರಾತ್ರಿ ಎನ್ನದೇ ಮರಿಕಟ್ಟಿ, ಶಿಗಿಹಳ್ಳಿ, ಪುಲಾರಕೊಪ್ಪ,ನಾವಲಗಟ್ಟಿ, ತಿಗಡಿ ಮಾರ್ಗವಾಗಿ ಸಂಚರಿಸುವದರಿAದ ರಸ್ತೆ ಕುಸಿಯುತ್ತಿರುವದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಸುಮಾರು ೧೫ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮಸ್ಥರು ಕಲ್ಲು (ಕಡಿ) ಸಾಗಾಟಕ್ಕೆ ಅನುಮತಿ ಪತ್ರ ನೀಡಲಾಗಿದೆಯೇ ಎಂದು ವಿಚಾರಿಸಿದ ಸಂದರ್ಭದಲ್ಲಿ ಲಾರಿಚಾಲಕರು ತಾವೇ ಬರೆದುಕೊಂಡಿರುವ ಕೊವೀಡ್-೧೯ ಎಂಬ ಪತ್ರವನ್ನು ತೋರಿಸಿದ್ದಾರೆ. ಇನ್ನೂ ಕೆಲವರು ಲಾರಿಯ ಗ್ಲಾಸ್‌ಗೆ ಹಚ್ಚಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ.

loading...