ಮೂಲೆ ಹಿಡಿದ ಮಡಕೆಗಳು, ಕೇಳುವರ‍್ಯಾರು..!

0
50

ಮೂಲೆ ಹಿಡಿದ ಮಡಕೆಗಳು, ಕೇಳುವರ‍್ಯಾರು..!
ತಲತಲಾಂತರದ ಕಸಬುಗಾರಿಕೆಗೆ ಸಂಕಷ್ಟ | ಜಿಲ್ಲೆಯಲ್ಲಿವೇ ನೂರಾರು ಕುಟುಂಬಗಳು
ಅಶೋಕ ಬಾ. ಮಗದುಮ್ಮ
ಬೆಳಗಾವಿ: ಆಧುನಿಕ ಯುಗದಲ್ಲಿಯೂ ಕುಂಬಾರಿಕೆ ನಂಬಿದವರಿಗೆ ಈಗ್ ಆಘಾತವಾಗಿದೆ. ಲಾಕ್‌ಡೌನ್ ಜಾರಿಯಾದ ಬಳಿಕ ಸಂಕಷ್ಟಕ್ಕೀಡಾದವರಲ್ಲಿ ಕುಂಬಾರರು ಸೇರಿದ್ದಾರೆ.
ನಿತ್ಯ ಜೀವನಕ್ಕೆ ಹರಸಾಹಸ ಪಡುತ್ತಿರುವ ಈ ಕುಟುಂಬಗಳಿಗೆ ದಿಚ್ಚೆತೊಚ್ಚದಂತಾಗಿದೆ. ಮೊದಲಿಗೆ ಕಷ್ಟಪಟ್ಟು ಜೀವನ ಸಾಗಿಸುವ ಈ ಕುಂಬಾರರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ.
ಜಿಲ್ಲೆಯ ನೂರಾರು ಕುಟುಂಬಗಳು ಜೀವನ ನಿರ್ವಹಿಸಲು ಪರದಾಡುತ್ತಿವೆ. ಈಗ ಜಿಲ್ಲೆಯಲ್ಲಿ ಲಾಕ್‌ಡೌನ್ ಬಹುತೇಕ ಸಡಿಲಗೊಂಡಿರುವುದರಿAದ ವ್ಯಾಪಾರವಾಗುವ ನಿರೀಕ್ಷೆಯಲ್ಲಿ ಅವರಿದ್ದಾರೆ.
ಗೋಕಾಕ, ನೇಗಿನಾಳ, ಖಾನಾಪೂರ, ಹೊಸುರ, ಬಾಳೆಕುಂದ್ರಿ ಹಾಗೂ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಂಬಾರಿಕೆಯನ್ನೇ ನೆಚ್ಚಿಕೊಂಡಿರುವ ಹತ್ತಾರೂ ಕುಟುಂಬಗಳಿವೆ. ಲಾಕ್‌ಡೌನ್ ಜಾರಿಯಾದ ನಂತರ ಕುಂಬಾರ ಬೀದಿಗೆ ಮಡಕೆ ಖರೀದಿಸುವವರು ಯಾರೂ ಸುಳಿದಿಲ್ಲ. ಪ್ರತಿಗ್ರಾಮ ಸಂತೆಗಳಲ್ಲಿ ಅಷ್ಟೋ ಇಷ್ಟೋ ಮಡಿಕೆಗಳನ್ನು ಸಾಗಾಟ, ಮಾರಾಟ ಮಾಡಿ ಜೀವನೋಪಾಯಕ್ಕೆ ಕಾಸು ಮಾಡಿಕೊಳ್ಳುವ ಕುಟುಂಬಗಳು ಮಡಿಕೆಯನ್ನು ನೋಡಿಕೊಂಡು ಮನೆಯಲ್ಲಿ ಕಾಲಕಳೆಬೇಕಾಗಿದೆ.
ಬೆಸಿಗೆ ನಂಬಿದವರಿಗೆ ಈಗ್ ಸಂಕಷ್ಟಗಳು: ಮಳೆ ಸಂದರ್ಭದಲ್ಲಿ ಯಾರು ಕೇಳದ ಮಡಿಕೆಗಳನ್ನು ಬೇಸಿಗೆ ಸಂದರ್ಭದಲ್ಲಿ ಗ್ರಾಮೀಣ, ನಗರಗಳತ್ತ ಮಾರಾಟ ಹೆಚ್ಚೆಚು, ಶರೀರದ ಆರೋಗ್ಯಕ್ಕಾಗಿ ತಂಪು ಪಾನಿಗಳಿಗಾಗಿ ಕುಂಬಾರಿಕೆ ಮಡಿಕೆ ಬಾರಿ ಬೇಡಿಕೆ. ಆದರೆ ಲಾಕ್ ಪರಿಸ್ಥಿರಿ ಬೆಸಿಗೆ ವೇಳೆಯಲ್ಲಿ ವಕರಿಸಿಕೊಂಡಿದೆ. ಮನೆಯಲ್ಲಿ ರಾಶಿ, ರಾಶಿ ಮಡಿಕೆಗಳು ಬಿದ್ದಿವೆ ಎನ್ನುತ್ತಾಳೆ ಶಾಂತವ್ವಾ ಮಡಿಕೆಯ ಓಡತಿ.
ತಲತಲಾಂತರದ ಕಸಬು: ತಾತ, ಮುತ್ತಜ್ಜನ ಕಾಲದಿಂದ ಕುಂಬಾರಿಕೆ ಮೇಲೆ ಅವಲಂಭಿತರಾಗಿರುವ ಈ ಕುಟುಂಬಗಳಿಗೆ ಸರಕಾರದಿಂದ ಯಾವುದೇ ಸಹಾಯಹಸ್ತ್ ನೀಡಿಲ್ಲ. ಕಷ್ಟದಿಂದ ನೆರೆ ಹೊರೆ ಜಮೀನುಗಳಲಿ ಒಂದು ಟನ್ ಜೇಡಿ ಮಣ್ಣನ್ನು ೫೦೦-೬೦೦ ರೂ. ಖರೀದಿಸಿ ಮಡಿಕೆ ತಯಾರಿಸುತ್ತಾರೆ. ಮಡಕೆ, ಹರವಿ, ದನ ಕರುಗಳಿಗೆ ನೀರು ಕುಡಿಸಲು ಕಲಗಚ್ಚು, ಒಲೆಗಳು, ಹಾಗೂ ಸುಗ್ಗಿಯ ಸಂಭ್ರದಲ್ಲಿ ನಾಗರಪಂಚಮಿಗೆ, ಬಸವಣ್ಣನ ವಿವಿಧ ಆಕಾರ ಕಲೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
ಈ ಭಾಗಗಳಲ್ಲಿ ಹಬ್ಬ ಹರಿ ದಿನಗಳಿಗೆ ಹೆಚ್ಚಾಗಿ ಮಡಕೆ ಹಾಗೂ ಹರವಿಗಳನ್ನು ಬಳಸುವುದುಂಟು. ಏಪ್ರಿಲ್, ಮೇ ತಿಂಗಳಲ್ಲಿ ಮದುವೆ, ಗೃಹಪ್ರವೇಶಗಳು ಹೆಚ್ಚು ನಡೆಯುವುದರಿಂದ ಮಣ್ಣಿನ ಹರವಿಗಳಿಗೆ ಬೇಡಿಕೆ ಇರುತ್ತದೆ. ಈಗ ಕಾರ್ಯಕ್ರಮಗಳು ನಡೆಯದ ಕಾರಣ ಖರೀದಿಸುವವರು ಇಲ್ಲದಂತಾಗಿದೆ.
ಬಾಕ್ಸ್===
ಸಂಕಷ್ಟ ದಿನಗಳ ಎದುರಾಗಿವೇ, ನಿತ್ಯ ಜೀವನ ಸಾಗಿಸಲು ಏನಾದರೂ ಕೆಲಸ ಮಾಡಬೇಕೆಂದರೆ ಕುಂಬಾರಿಕೆ ಬಿಟ್ಟು ಬೇರೆ ಕಸಬು ಗೊತ್ತಿಲ್ಲ. ಸರಕಾರ ಎಲ್ಲ ವರ್ಗಗಳಿಗೆ ಸಹಾಯ ಮಾಡುತ್ತಿದೆ. ಕುಂಬಾರಿಕೆಗಳ ಕುಟುಂಬಗಳನ್ನು ಕಣ್ತೆರೆದು ನೋಡಬೇಕಿದೆ. ಉಳಿದ ದಿನಗಳಲ್ಲಿ ಸಂಪಾದನೆ ೩೦೦-೪೦೦ ರೂ. ಆಗುತ್ತಿತ್ತು. ಮದುವೆ ಸಂಭ್ರಗಳು ಪಾರಾಗುತ್ತಿವೆ ಮುಂದಿನ ವರ್ಷದವರೆಗೆ ಕಾಯ್ದು ನೋಡಬೇಕು.
ಹನುಮಂತಪ್ಪ ಕುಂಬಾರ, ನೇಸರಗಿ.
ಬಾಕ್ಸ್====
ಸರ್ಕಾರ ಬೇರೆ ಸಮುದಾಯದವರಿಗೆ ವಿಶೇಷ ಪ್ಯಾಕೇಜ್ ಮಾಡಿದೆ. ಕುಂಬಾರಿಕೆ ನಂಬಿದವರಿಗೆ ಸರಕಾರ ಯಾವುದೇ ಸಹಾಯಕ್ಕೆ ಮುಂದಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಬಂದಿಲ್ಲ. ಸ್ಥಳೀಯ ಅಧಿಕಾರಿಗಳ ಸಂಕಷ್ಟದ ಮನವಿಯನ್ನು ಸಲ್ಲಿಸಲಾಗುವುದು.
ಆನಂದ ಕುಂಬಾರ, ಗೋಕಾಕ.

loading...