ಕೊರೊನ ಕರಿ ನೆರಳು ಕರ್ನಾಟಕ ಗಡಿಯಲ್ಲಿ ಮಂಡ್ಯದ ಮಹಿಳೆ ಅಂತ್ಯ ಸಂಸ್ಕಾರ

0
52

ಕೊರೊನ ಕರಿ ನೆರಳು
ಕರ್ನಾಟಕ ಗಡಿಯಲ್ಲಿ ಮಂಡ್ಯದ ಮಹಿಳೆ ಅಂತ್ಯ ಸಂಸ್ಕಾರ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ :ಹೃದಯಾಘಾತದಿಂದ ಮೃತಳಾದ ಮಂಡ್ಯದ ಟೆಕ್ಕಿ ಮಹಿಳೆಗೆ ಕರ್ನಾಟಕದ ಗಡಿಯಲ್ಲಿ ಅಂತ್ಯ ಸಂಸ್ಕಾರ ಮಾಡಿರುವ ಹೃವಿದ್ರಾವಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಗಡಿಯಲ್ಲಿರುವ ಕೊಗನೋಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಹತ್ತಿರ ಇರುವ ಕೋಗನೋಳಿ ಚೆಕ್ ಪೋಸ್ಟ ಬಳಿ ಅಂತ್ಯ ಸಂಸ್ಕಾರ ನಡೆಸಲಾಗಿದೆ .ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಸೌಮ್ಯ ಎಂಬುವವರು ,ಕಳೆದ
ಎರಡು ದಿನಗಳ ಹಿಂದೆ ಪುಣೆಯಲ್ಲಿ ಮೃತಳಾಗಿದ್ದಳು.ಮೃತ ಸೌಮ್ಯ (೩೫)
ಮಂಡ್ಯ ಜಿಲ್ಲೆಯ ಮುದ್ದುರು ತಾಲೂಕಿನವಳು.
ಸೌಮ್ಯಳನ್ನು ತಮ್ಮ ಊರಿಗೆ ತಗೆದುಕೊಂಡು‌ ಹೋಗಲಿಕೆ ಮಂಡ್ಯದ ಜಿಲ್ಲಾಡಳಿತ ತಿರಸ್ಕರಿಸಿದ ಹಿನ್ನೆಲೆ ,ಸೌಮ್ಯಳ ದೇಹವನ್ನು ಕೋರೊನಾ ಟೆಸ್ಟ್ ಮಾಡಿಸಿರದ ಹಿನ್ನಲೆ ಶವವನ್ನು‌ ಮಂಡ್ಯ ಜಿಲ್ಲಾಡಳಿತ ತಿರಸ್ಕರಿಸಿತು .
ನಿಪ್ಪಾಣಿ ಗಡಿಯಲ್ಲೇ ೧ ದಿನ ಸೌಮ್ಯಳ ಮೃತ ದೇಹದೊಂದಿಗೆ ಪತಿ ಶರತ್, ಪುಟ್ಟ ಮಗಳು ಶ್ವೇತಾ (೫) ಹಾಗೂ ತಂದೆ ಅಪ್ಪಯ್ಯ ಪರದಾಡಿದ್ದರು .

ಘಟನೆಯ ಮಾಹಿತಿ ಪಡೆದ ಬೆಳಗಾವಿ ಜಿಲ್ಲಾಡಳಿತ ಮಂಡ್ಯ ಕುಟುಂಬದ ನೆರವಿಗೆ ಧಾವಿಸಿದ್ದಾರೆ ,
ನಿನ್ನೆ ರಾತ್ರೀ 12 ಸುಮಾರಿಗೆ ಸೌಮ್ಯಳ ಕುಟುಂಬಸ್ಥರನ್ನು ಬೇಟಿ ನೀಡಿದ ಬೆಳಗಾವಿ ಎಸ್ಪಿ ನಿಂಬರಗಿ ಹಾಗೂ ಚಿಕ್ಕೋಡಿ ಎಸಿ ರವಿಂದ್ರ ಕರಲಿಂಗಣವರ್ ಮೃತ ದೇಹವನ್ನು ಮೋಕ್ಷ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ .

ಕುಟುಂಬಸ್ಥರ ಜೊತೆ ಸೇರಿ ಚೆಕ್ ಪೋಸ್ಟ ಹತ್ತಿರ ಇರುವ ಸರ್ಕಾರಿ ಗೋಮಾಳಲದಿಂದ ಕಟ್ಟಿಗೆ ವ್ಯವಸ್ಥೆ ಮಾಡಿ ಸಮೀಪದ‌ ದೂಧಗಂಗಾ ನದಿ ದಂಡೆಯಲ್ಲಿ ಸೌಮ್ಯಳ ಅಂತ್ಯ ಸಂಸ್ಕಾರ ಮಾಡಿಲಾಗಿದೆ .
ಕೊರೋನ ಕರಿ ನೆರಳಿಗೆ ಮಂಡ್ಯದ ಸೌಮ್ಯ ಕರ್ನಾಟಕದ ಗಡಿಯಲ್ಲಿ ಅಂತ್ಯ ಸಂಸ್ಕಾರ ನೇರವೆರಿಸಲಾಗಿದೆ .

loading...