ಮಹಾತಾಯಿ ಮಡಿಲು… ಮಮತೆಯ ಕಡಲು..

0
37

ಮಹಾತಾಯಿ ಮಡಿಲು… ಮಮತೆಯ ಕಡಲು..

ಬೆಳಗಾವಿ

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ನುಡಿದಂತೆ ನಡೆದ ಮನೆ ಮಗಳು. ಜನರ ಸಂಕಷ್ಟಗಳಿಗೆ ಮಿಡಿಯುವ ಮನ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನೆ ಎರಡೇ ವರ್ಷದಲ್ಲಿ ಬದಲಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಫೆ.14ರಂದು ತಮ್ಮ ಜನ್ಮದಿನಾಚಾರಣೆಯಿದ್ದರೂ ತಮ್ಮ ಕ್ಷೇತ್ರದ ಮತದಾರರು ಗೆಲ್ಲಿಸಿಕೊಟ್ಟ ದಿನಾಂಕ ಮೇ12 ರಂದು ಆಚರಿಸಿಕೊಳ್ಳುತ್ತಿರುವುದು ವಿಶೇಷ ವಾದರೆ. ಈ ವರ್ಷ ಪ್ರವಾಹ ಹಾಗೂ ಭೀಕರ ಮಹಾಮಾರಿ ಕೊರೋನೊದಿಂದ ತತ್ತರಿಸಿದ ಗ್ರಾಮೀಣ ಜನರ ರಕ್ಷಣೆಗಾಗಿ ಮನೆಯ ಕುಟುಂಬ ಲೆಕ್ಕಿಸದೆ ಕ್ಷೇತ್ರದ ಜನರ ಸೇವೆಗಾಗಿ ನಿಂತ ದಿಟ್ಟ ಮಹಿಳೆ ಶಾಸಕಿ ಹೆಬ್ಬಾಳ್ಕರ್.
12. ಮೇ.2018 ರಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಚುಕ್ಕಾಣಿ ಹಿಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಜನತೆ ನಿರೀಕ್ಷೆ ಮಾಡದಷ್ಟು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಹಾಗೂ ಬಿಜೆಪಿ ಸರಕಾರದಲ್ಲಿ ತಮ್ಮ ಕ್ಷೇತ್ರಕ್ಕಾಗಿ ನೂರಾರು ಕೋಟಿ ಅನುದಾನವನ್ನು ತೆಗೆದುಕೊಂಡು ಅಭಿವೃದ್ದಿಯ ಪತದ ಕಡೆಗೆ ತೆಗೆದುಕೊಂಡು ಹೋಗಿದ್ದಾರೆ. ತಮ್ಮ ಕ್ಷೇತ್ರದ ಜನರು ಯಾವ ಪರಿಸ್ಥಿತಿಯಲ್ಲಿ ಸಂಕಷ್ಟ ಪಡಬಾರದೆಂದು ಮನೆ ಮಗಳಾಗಿ ಕ್ಷೇತ್ರದಲ್ಲಿ ಟೊಂಕ ಕಟ್ಟಿ ನಿಂತು ಕೆಲಸ ಮಾಡಿದ್ದಾರೆ.
ಆದರೆ 2019ರಲ್ಲಿ ಭೀಕರ ಪ್ರವಾಹ ಎದುರಾದ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ತಾಯಿ ಪೌಂಡೇಶನ್ ವತಿಯಿಂದ ಪ್ರತಿ ಮನೆ ಮನೆಗೂ ಸಹಾಯ ಮಾಡಿ ಗ್ರಾಮೀಣ ಕ್ಷೇತ್ರದ ಜನರು ಯಾವುದೇ ಕಾರಣಕ್ಕೂ ಬೇರೆಯವರ ಮುಂದೆ ಸಹಾಯಕ್ಕಾಗಿ ಕೈ ಚಾಚಬಾರದು ಎಂದು ಸ್ವತಃ ಮುಂದೆ ನಿಂತು ಜನರ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸಿ ಸಹಾಯ ಮಾಡಿದ ಶ್ರೇಯ ಹೆಬ್ಬಾಳ್ಕರ್ ಅವರಿಗೆ ಸಲ್ಲುತ್ತದೆ.
ಪ್ರವಾಹ ತಗ್ಗಿತ್ತು. ಜನರು ನೆಮ್ಮದಿಯಿಂದ ಇರುವಾಗಿ ಚೀನಾದ ವುಹಾನ್‌ನಿಂದ ಆರಂಭವಾಗಿದ್ದ ಕೊರೋನೊ ರಣಕೇಕೆಯಿಂದ ಇಡೀ ದೇಶವೇ ಲಾಕ್‌ಡೌನ್ ಆದ ಪರಿಣಾಮ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಕೂಲಿಕಾರ್ಮಿಕರು, ಬಡವರು, ನಿರ್ಗತಿಕರಿಗೆ ಸರಕಾರದ ಸಹಾಯ ಕೇಳದೆ ಸ್ವತಃ ತಾವೇ ತುರ್ತಾಗಿ ಸ್ಪಂದಿಸಿದ್ದಲ್ಲದೆ, ಕೊರೋನೊ ಸೋಂಕಿನ ಹೆಚ್ಚಿನ ಪ್ರಕರಣ ಕಂಡು ಬಂದಿರುವ ಹಿರೇಬಾಗೇವಾಡಿಯ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಗ್ರಾಂಈಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಣವೀಯ ನೆಲೆಯಲ್ಲಿ ಕೊರೋನೊ ಭೀತಿ ಲೆಕ್ಕಿಸದೆ ಕೆಲಸ ಮಾಡಿದ್ದಾರೆ.
ಲಕ್ಷ್ಮೀ ತಾಯಿ ಪೌಂಡೇಶನ್ ಮೂಲಕ ಮಾನವೀಯ ನೆಲಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಅಗತ್ಯ ವಸ್ತು ವಿತರಿಸುತ್ತ, ಗ್ರಾಮೀಣ ಕ್ಷೇತ್ರ ಜನರ ಕಣ್ಣೀರು ಒರೆಸಿ ದೈರ್ಯ ತುಂಬವ ಕೆಲಸ ಮಾಡಿರುವುದು ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮೂರು ರಾಜ್ಯಗಳ ಸಂಪರ್ಕಕೊಂಡಿಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಕೊರೋನೊ ಸೋಂಕು ಪತ್ತೆಯಾಗುತ್ತಿದ್ದಂತೆ ಶಾಸಕಿ ಲಕ್ಷ್ಮೀ ಬ್ಬಾಳ್ಕರ್ ಅವರು ತಮ್ಮ ಲಕ್ಷ್ಮೀ ತಾಯಿ ಪೌಂಡೇಶನ್ ಮೂಲಕ ಕೊರೋನೊ ಸೋಂಕಿನ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುತ್ತ ಬಂದಿದ್ದಾರೆ. ಕೊರೋನೊ ಸೋಂಕಿನ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಯಲ್ಲಿ ಆತ್ಮಸ್ಥೆöÊರ್ಯ ತುಂಬಿದ್ದಲ್ಲದೆ, ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ನೀಡುತ್ತ ಬಂದಿದ್ದಾರೆ. ತಾವಷ್ಟೆ ಅಲ್ದೆ, ಅವರ ಕುಟುಂಬವೇ ಕೊರೋನೊ ವಿರುದ್ದ ಹೋರಾಡುತ್ತ ಗ್ರಾಮೀಣ ಜನರ ರಕ್ಷಣೆ ನಿಂತಿರುವುದು ಕ್ಷೇತ್ರದ ಜನರಲ್ಲಿ ಹೆಬ್ಬಾಳ್ಕರ್ ನುಡಿದಂತೆ ನಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
—————
ಹೇಳಿಕೆ
ದಶಕಗಳಿಂದ ಹಿಂದೆ ಉಳಿದಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನಾಗಿಸಿ ಕಟ್ಟುವ ನನ್ನ ಕನಸು ಇನ್ನೂ ಕಮರಿಲ್ಲ. ಎಂದಿಗೂ ಕಮರಲು ನೀವು ಅವಕಾಶ ನೀಡುವುದಿಲ್ಲ ಎನ್ನುವ ವಿಶ್ವಾಸ ಇದೆ. ಎಂಥ ಕಷ್ಟದ ಸಂದರ್ಭ ಬಂದರೂ ಎದೆಗುಂದದೆ ಮುನ್ನಗ್ಗೋಣ. ಕ್ಷೇತ್ರದ ಜನರು, ದೇವರು ನನ್ನ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸ ನನಗೆ ಇದೆ. ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದ ಇರುವವರೆಗೂ ನನ್ನ ಕನಸು ಕಮರುವುದಿಲ್ಲ.
-ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ.

loading...