ಬೆಳಗಾವಿಯ ಐದು ತಿಂಗಳ ಗರ್ಭಿಣಿಗೆ ಕೊರೋನೊ ಸೋಂಕು ?

0
43

 

ಬೆಳಗಾವಿ

ಕಳೆದ ಮೂರು ದಿನಗಳಿಂದ ಬೆಳಗಾವಿ  ಜಿಲ್ಲೆಯಲ್ಲಿ ಯಾವುದೇ ಕೊರೋನೊ ಸೋಂಕು ಪತ್ತೇಯಾಗಿರಲಿಲ್ಲ. ಆದರೆ ಗುರುವಾರ ಬೆಳಗಿನ ವರದಿಯಲ್ಲಿ 27 ವರುಷದ ಮಹಿಳೆಗೆ ಕೊರೋನೊ ಸೋಂಕು ದೃಢಪಟ್ಟಿದೆ.

ಬೆಳಗಾವಿ ಜಿಲ್ಲೆಯಲ್ಲಿ ರಣಕೇಕೆ ಹಾಕುತ್ತಿರುವ ಕೊರೋನೊ ವೈರಸ್ ಬೆಳಗಾವಿಯ ಹಿರೇಬಾಗೇವಾಡಿಯಿಂದಲೇ ತನ್ನ ಕದಂಬ ಬಾಹು ಚಾಚಿದೆ. ಮುಂಬೈನಿಂದ  ಮಹಾರಾಷ್ಟ್ರ ಪ್ರಯಾಣ ಮಾಡಿದ್ದ  ಐದು ತಿಂಗಳ ಗರ್ಭಿಣಿಗೆ ಕೊರೋನಾ  ದೃಡಪಟ್ಟಿದೆ ಎಂದು ಹೇಳಲಾಗುತ್ತಿದೆ. ಈಕೆ  ಮುಂಬಯಿಯಿಂದ ಬೆಳಗಾವಿಯ ಸದಾಶಿವ ನಗರಕ್ಕೆ ಆಗಮಿಸಿದ್ದರು. ಒಟ್ಟು ಬೆಳಗಾವಿಯಲ್ಲಿ 114 ಜನರಿಗೆ ಕೊರೋನೊ ಸೋಂಕು ದೃಢಪಟ್ಟಿದೆ. ಸದಾಶಿವ ನಗರದ ಗರ್ಭಿಣಿಯ ಮನೆಯ ಸುತ್ತಮುತ್ತಲು ಜಿಲ್ಲಾಡಳಿತ ಬಫರ್ ಝೋನ್ ಎಂದು ಘೋಷಣೆ ಮಾಡಿದೆ.

loading...