ಯುಸ್ ಲೆಸ್ ಇಂಕ್ ಬಳಕೆ : ಹೋಮ್ ಕ್ವಾರಂಟೈನ್ ವ್ಯಕ್ತಿಗಳ ಬೇಕಾಬಿಟ್ಟಿ ಓಡಾಟ

0
92

ಯುಸ್ ಲೆಸ್ ಇಂಕ್ ಬಳಕೆ : ಹೋಮ್ ಕ್ವಾರಂಟೈನ್ ವ್ಯಕ್ತಿಗಳ ಬೇಕಾಬಿಟ್ಟಿ ಓಡಾಟ

ಕನ್ನಡಮ್ಮ ಸುದ್ದಿ: ಅಥಣಿ :ಕೊರೊನ ಸೊಂಕು ಹರಡದಂತೆ ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ಆಗಮಿಸಿದವರಿಗೆ ಕ್ವಾರಂಟೈನ್ ಮಾಡಿ ಹೊರಗಡೆ ಅಲೆದಾಡದಂತೆ ಸಿಲ್ ಹಾಕಲಾಗುತ್ತದೆ. ಆದರೆ ಈ ಸಿಲ್ ಅರ್ಥ ಕಳೆದುಕೊಂಡಿದೆ. ಕಾರಣ ಇಲ್ಲಿ ಬಳಸುವ ಇಂಕ್ ಯೂಜ್ ಲೆಸ್ ಇಂಕ್ ಆಗಿದೆ.ಇಂತಹ ಘಟನೆ ನಡೆದಿರುವುದು ಜಿಲ್ಲೆಯ ಅಥಣಿ ಪಟ್ಟಣದಲ್ಲಿ .

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಆಸ್ಪತ್ರೆಯ ಇಂಕಲ್ಲಿ ತಾಕತ್ತೇ ಇಲ್ಲ.ಕ್ವಾರಂಟೈನ್ ಸೀಲ್ ಹಾಕಿದ ಕೆಲ ನಿಮಿಷಗಳಲ್ಲಿ ಕೈಯಿಂದ ಒರೆಸಿದರೂ ಈ ಇಂಕ್ ಅಳುಕಿ ಹೋಗುತ್ತಿದೆ .
ಕ್ವಾರಂಟೈನ್ ಮಾಡಲು ವ್ಯವಸ್ಥೆ ಇಲ್ಲದೆ ಹೋಮ್ ಕ್ವಾರಂಟೈನ್ ಅಂತ ಸೀಲ್ ಹಾಕುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು.
ಈ ಇಂಕ್ ಅಳಸಿ ಹೋಗುತ್ತಿರುವುದರಿಂದ ಮನೆಯಲ್ಲಿ ಉಳಿಯದೆ ಬೇಕಾಬಿಟ್ಟಿ ಅಲೆಯುತ್ತಿರುವ ಹೊರಗಿನಿಂದ ಬಂದ ಸಾರ್ವಜನಿಕರು.

ಅಥಣಿ ತಾಲೂಕಿನಲ್ಲಿ
ನೋ ಸೀಲ್ ನೋ ಕ್ವಾರಂಟೈನ್!! ಎನ್ನುವಂತಾಗಿದೆ .
ವೈದ್ಯಾಧಿಕಾರಿ ನಿರ್ಲಕ್ಷ್ಯ ದಿಂದ
ಅಥಣಿ ತಾಲೂಕಿನಲ್ಲಿ ಕೊರೊನಾ ಹಬ್ಬುವ ಸಾಧ್ಯತೆ ಇದೆ .

loading...