ಸಣ್ಣ ರೈತರಿಗೆ 4 ಲಕ್ಷರೂಪಾಯಿವರೆಗೆ ಸಾಲ ಸೌಲಭ್ಯ, ವಲಸೆ ಕಾರ್ಮಿಕರಿಗೆ 11 ಸಾವಿರ ಹಂಚಿಕೆ; ನಿರ್ಮಲಾ ಸೀತಾರಾಮನ್

0
67

ನವದೆಹಲಿ:- ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ವಿವರಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಬುಧವಾರದಿಂದ ಹಂತ ಹಂತವಾಗಿ ಪ್ರಕಟಿಸುತ್ತಿದ್ದು. ಇದರ ಭಾಗವಾಗಿ ಗುರುವಾರ ರೈತರು, ವಲಸೆ ಕಾರ್ಮಿಕರಿಗೆ ವಿಶೇಷ ದೃಷ್ಟಿ ಹರಿಸಿದ್ದಾರೆ, ಆತ್ಮ ನಿರ್ಭರ್ ಅಭಿಯಾನ ಭಾಗವಾಗಿ ರೂಪಿಸಿರುವ ಪ್ಯಾಕೇಜ್ ವಿವರಗಳನ್ನು ಅವರು ನೀಡಿದರು.
ಸಣ್ಣ ರೈತರಿಗೆ 4 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಹೊಸದಾಗಿ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಮಂಜೂರು ಮಾಡಲಾಗುವುದು ಎಂದು ಪ್ರಕಟಿಸಿದರು.
ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೆ ಮೇ 31ರವರೆಗೆ ಬಡ್ಡಿ ರಿಯಾಯಿತಿ ನೀಡಲಾಗುವುದು. ಸಣ್ಣ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವ ವ್ಯವಸ್ಥೆ ರೂಪಿಸಲಾಗುವುದು.
ವಲಸೆ ಕಾರ್ಮಿಕರಿಗಾಗಿ 11 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗುವುದು ಬೀದಿ ಬದಿಯ ವ್ಯಾಪಾರಿಗಳಿಗಾಗಿ ಪ್ರತ್ಯೇಕ ಪ್ಯಾಕೇಜ್ ಪ್ರಕಟಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಮೌಲಿಕ ಸದುಪಯೋಗಗಳಿಗೆ 4,200 ಕೊಟಿ ಹಂಚಿಕೆ ಮಾಡಲಾಗುವುದು.
ವಲಸೆ ಕಾರ್ಮಿಕರಿಗೆ ಎಲ್ಲ ರೀತಿಯಲ್ಲೂ ನೆರವಾಗಲು ಪ್ರಯತ್ನ ನಡೆಸಲಾಗುವುದು. ಪಟ್ಟಣ ಪ್ರದೇಶಗಳಲ್ಲಿ ಬಡ ಕಾರ್ಮಿಕರಿಗಾಗಿ 3 ಕೋಟಿ ಮುಖಗವುಸು ಪೂರೈಸಲಾಗುವುದು
ವಲಸೆ ಕಾರ್ಮಿಕರಿಗೆ ಮೂರು ಹೊತ್ತು ಆಹಾರ ಒದಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು ನೆರವು ಶಿಬಿರ ಆಯೋಜಿಸಲಾಗುವುದು. ಭೋಜನ ವ್ಯವಸ್ಥೆಗೆ 11 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ವಲಸೆ ಕಾರ್ಮಿಕರು ಈಗ ಇರುವಲ್ಲಿಯೇ ಹೊಸದಾಗಿ ನೋಂದಣಿ ಮಾಡಿಕೊಂಡು ಉಪಯೋಗ ಪಡೆಯಬಹುದು. ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
ನಗರ ಪ್ರದೇಶಗಳ ಕಾರ್ಮಿಕರಿಗೆ ವ್ಯವಸ್ಥೆ ಮಾಡಿರುವ ವಸತಿ ಶಿಬಿರಗಳಲ್ಲಿ ಮೂರು ಹೊತ್ತು ಭೋಜನ ಒದಗಿಸಲಿದ್ದೇವೆ. ದೇಶಾದ್ಯಂತ ಒಂದೇ ಮಾದರಿ ಕೂಲಿ ದರ ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ

ಎಲ್ಲ ವಲಸೆ ಕಾರ್ಮಿಕರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು, ಅವರೆಲ್ಲರಿಗೂ ವಿಮಾ ಸೌಲಭ್ಯ ಕಲ್ಪಿಸಲಾಗುವುದು
ಬುಡಕಟ್ಟು ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

loading...