ಬಂಗಾಳ ಆಸ್ಪತ್ರೆಯಿಂದ 400 ನರ್ಸ್‌ಗಳು ರಾಜೀನಾಮೆ

0
37

ನವದೆಹಲಿ/ಕೊಲ್ಕತ್ತಾ:- ಭಾರತ, ಕೋವಿಡ್-19 ಸೋಂಕಿನ ವಿರುದ್ಧದ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಬಂಗಾಳ ಆಸ್ಪತ್ರೆಗಳ ಸುಮಾರು 400 ನರ್ಸ್‌ಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.185 ದಾದಿಯರು ಶನಿವಾರ ಮಣಿಪುರಕ್ಕೆ ಹಿಂದಿರುಗಿದ್ದರೆ, ಇನ್ನೂ 186 ಮಂದಿ ಒಡಿಶಾ, ಜಾರ್ಖಂಡ್, ಛತ್ತೀಸ್‌ಗಡ ಮತ್ತು ಇತರ ರಾಜ್ಯಗಳತ್ತ ಹೊರಟಿದ್ದಾರೆ ಎಂದು ಭಾನುವಾರ ರಾಷ್ಟ್ರ ರಾಜಧಾನಿಯನ್ನು ತಲುಪಿದ ವರದಿಗಳು ತಿಳಿಸಿವೆ.

ಈ ದಾದಿಯರೆಲ್ಲರೂ ಕೋಲ್ಕತಾ ಸೇರಿದಂತೆ ರಾಜ್ಯಾದ್ಯಂತ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಆಸ್ಪತ್ರೆಗಳ ಕೆಲಸಕ್ಕೆ ದಾದಿಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ ಕಾರಣ ಇನ್ನೂ ಗೊತ್ತಾಗಿಲ್ಲ.

ರಾಜ್ಯವ್ಯಾಪಿ ಕೊರೋನಾ ಸಾವಿನ ಸಂಖ್ಯೆ 232ಕ್ಕೆ ಏರಿರುವುದರ ಮಧ್ಯೆಯೇ ನರ್ಸ್‌ಗಳು ಈ ನಿರ್ಧಾರ ಕೈಗೊಂಡಿರುವುದರಿಂದ ಅವರನ್ನು ಮನವೊಲಿಸಲು ಮತ್ತು ಕಾರಣ ಪತ್ತೆ ಹಚ್ಚಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ವಿವಿಧ ಕಡೆಗಳಿಂದ ಒತ್ತಾಯ ಕೇಳಿಬರುತ್ತಿವೆ.

loading...