ಸ್ವ- ಗ್ರಾಮಕ್ಕೆ ತೆರಳಲು ಕೂಲಿ ಕಾರ್ಮಿಕರ ಪರದಾಟ

0
22

ಸ್ವ- ಗ್ರಾಮಕ್ಕೆ ತೆರಳಲು ಕೂಲಿ ಕಾರ್ಮಿಕರ ಪರದಾಟ

ಕನ್ನಡಮ್ಮ ಸುದ್ದಿ -ಚಿಕ್ಕೋಡಿ : ಪುಣೆಯಿಂದ ಬಂದ 70 ಕ್ಕೂ ಹೆಚ್ಚು ಕಾರ್ಮಿಕರ ಮುಂದೆ ಕರ್ನಾಟಕ ಗಡಿ ಪ್ರವೇಸಿಸಲು ಅನುಮತಿ ಸಿಗದೆ ಪರದಾಟ ಅನುಭವಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹೊರವಲಯದ ಗಡಿಯಲ್ಲಿ ನಡೆದಿದೆ .

ರವಿವಾರ ಕರ್ನಾಟಕದ ಗಡಿಯಲ್ಲಿ ರಾಜ್ಯ ಪ್ರವೇಶಕ್ಕೆ ಕಾರ್ಮಿಕರು ಪರದಾಡಿದ್ದಾರೆ .
ಪುಟ್ಟ ಪುಟ್ಟ ಮಕ್ಕಳು ಮಹಿಳೆಯರೊಂದಿಗೆ ಕಾರ್ಮಿಕರ ಆಗಮಿಸಿದ್ದಾರೆ. ಆದರೆ ಕರ್ನಾಟಕ ಗಡಿ ಪ್ರವೇಶಕ್ಕೆ ನಿರಾಕರಿಸಿದ್ದಕೆ ಸಂಕಷ್ಟಕ್ಕೆ ಈ ಕಾರ್ಮಿಕರು ಸಿಲುಕ್ಕಿದ್ದರು ‌.ರಾಯಚೂರು, ಗುಲ್ಬರ್ಗಾ, ಯಾದಗಿರಿ, ಬಾಗಲಕೋಟ ಮೂಲದ ಕಾರ್ಮಿಕರು ಇವರಾಗಿದ್ದು ,
ಮಹಾರಾಷ್ಟ್ರದ ಪೋಲಿಸರ ಕರ್ನಾಟಕ ರಾಜ್ಯದ ಗಡಿಯಲ್ಲಿ ಬಿಟ್ಟು ಹೋಗಿದ್ದಾರೆ.
ನಿಮ್ಮ ರಾಜ್ಯದವರು ನಿಮಗೆ ಸಹಾಯ ಮಾಡುತ್ತಾರೆ ಹೋಗಿ ಎಂದು ಮಹಾರಾಷ್ಟ್ರ ಪೋಲಿಸರ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಪ್ಪಾಣಿ ಹೊರವಲಯದ ಮುರಗೋಡ ರಸ್ತೆಯ ಬಾರ್ಡರ್ ನಲ್ಲಿ ಮಹಾರಾಷ್ಟ್ರ ಪೊಲೀಸರು ಈ ಕಾರ್ಮಿಕರನ್ನು ಬಿಟ್ಟು ಹೋಗಿದ್ದಾರೆ .
ಇನ್ನು ತಮ್ಮ ಗ್ರಾಮಗಳಿಗೆ ಹೇಗೆ ಹೋಗಬೇಕು ಎಂದು ದಾರಿ ಕಾಣದೆ 70 ಕಾರ್ಮಿಕರ ಕುಳಿತ್ತಿದ್ದಾರೆ .
ನಾವು ಏನು ತಪ್ಪು ಮಾಡಿದವಿ ನಾವು ತಪ್ಪು ಮಾಡಿಲ್ಲಾ ಸರ್ಕಾರ ನಮ್ಮನ್ನ ನಮ್ಮ ಊರುಗಳಿಗೆ ಬಿಡಲಿ ಎಂದು ಕಾರ್ಮಿಕರ ಮನವಿ ಮಾಡಿಕೊಂಡಿದ್ದಾರೆ .
ಸದ್ಯ ನಿಪ್ಪಾಣಿ ಪೊಲೀಸರಿಂದ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯ ಮೆರೆದಿದ್ದಾರೆ .

loading...