ಕೊರೊನ ವಿರುದ್ಧ ಯುದ್ಧಕ್ಕೆ ಸತೀಶ ಜಾರಕಿಹೋಳಿ ಸಾಥ್ :ಗೆಸ್ಟ್ ಹೌಸದಲ್ಲಿ ಕ್ವಾರಂಟೈನಗೆ ಅವಕಾಶ ನೀಡಿ ಜವಾಬ್ದಾರಿ ಮೆರೆದ ಸಾಹುಕಾರ್

0
36

ಕೊರೊನ ವಿರುದ್ಧ ಯುದ್ಧಕ್ಕೆ ಸತೀಶ ಜಾರಕಿಹೋಳಿ ಸಾಥ್ :ಗೆಸ್ಟ್ ಹೌಸದಲ್ಲಿ ಕ್ವಾರಂಟೈನಗೆ ಅವಕಾಶ ನೀಡಿ ಜವಾಬ್ದಾರಿ ಮೆರೆದ ಸಾಹುಕಾರ್

ಕನ್ನಡಮ್ಮ ಸುದ್ದಿ-ಯಮಕನಮರಡಿ: ಕೊರೊನ ವೈರಸ್ ಹರಡದಂತೆ ಹೊರ ರಾಜ್ಯದಿಂದ ಆಗಮಿಸುತ್ತಿರುವ ಸರಕಾರ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಸರಕಾರದ ಕ್ವಾರಂಟೈನ್ ವ್ಯವಸ್ಥೆ ಜೊತೆಗೆ ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯದ್ಯಕ್ಷರಾಗಿರುವ ಸತೀಶ ಜಾರಕಿಹೋಳಿ ಹೊರ ರಾಜ್ಯದಿಂದ ಆಗಮಿಸಿದ ನೂರಾರು ಜನರನ್ನ ಕ್ವಾರಂಟೈನ್ ಮಾಡಲು ತಮ್ಮ ಸ್ವಂತ ಗೆಸ್ಟ್ ಹೌಸ್ ನೀಡಿ ಆದರ್ಶ ರಾಜಕಾರಣಿ ಎನ್ನಿಸಿಕೊಂಡಿದ್ದಾರೆ .

ಕ್ಸರಕಾರ ಕೊರೊನ ಹರಡದಂತೆ ಹೊರ ರಾಜ್ಯದಿಂದ ಆಗಮಿಸುವವರನ್ನು ಕ್ವಾರಂಟೈನ್ ಮಾಡಲು ಸಾಕಷ್ಟು ಖರ್ಚು ಮಾಡುತಿದೆ. ಆದರೆ ಶಾಸಕ ಸತೀಶ ಜಾರಕಿಹೋಳಿ ಕ್ವಾರಂಟೈನ್ ಮಾಡಲು ಸರಕಾರದ ಕಡೆಗೆ ಬೊಟ್ಟ ಮಾಡದೆ ತಮ್ಮ ಕ್ಷೇತ್ರದಲ್ಲಿರುವ ಅಲದಾಳ ಗ್ರಾಮದಲ್ಲಿನ ಅವರ ಸ್ವಂತ ಗೆಸ್ಟ್ ಹೌಸನಲ್ಲಿ ನೂರಾರು ಜನರನ್ನು ಕ್ವಾರಂಟೈನ್ ಮಾಡಲು ಅವಕಾಶ ಕಲ್ಪಿಸುವದರ ಜೊತೆಗೆ ಅವರ ಊಟ ಉಪಚಾರದ ವ್ಯವಸ್ಥೆಯನ್ನು ಮಾಡಿದ್ದಾರೆ .

ಇನ್ನು ಇದರ ಜೊತೆಗೆ ಕ್ವಾರಂಟೈನ್ ಮಾಡಲಾದ ಮಹಾರಾಷ್ಟ್ರದ ಪುಣೆ ,ಸಾತಾರ ಮುಂಬೈ ಪಟ್ಟಣದಿಂದ ಆಗಮಿಸಿರುವ ಇವರನ್ನ ನೇರವಾಗಿ ಭೇಟಿಯಾಗಿ ಅವರ ಕ್ಷೇಮವನ್ನು ವಿಚಾರಿಸಿ ಹಾಗೂ ವೈದ್ಯಕೀಯ ತಪಾಸಣೆಯನ್ನು ಮಾಡಿಸುತ್ತಿದ್ದಾರೆ .ಇಂತಹ ಶಾಸಕರು ಸಿಗುವುದು ಯಮಕನಮರಡಿ ಕ್ಷೇತ್ರದ ಜನರ ಪುಣ್ಯ ಇಂತಹ ನಾಯಕರು ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂದು ಕ್ವಾರಂಟೈನ್ ಮಾಡಲಾದ ವ್ಯಕ್ತಿ ಶಾಸಕ ಸತೀಶ ಜಾರಕಿಹೋಳಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಭಾಕ್ಸ್
ಕೊರೊನ ಯುದ್ಧಕ್ಕೆ ಸರಕಾರಕ್ಕೆ ಶಾಸಕ ಸತೀಶ ಜಾರಕಿಹೋಳಿ ಸಾಥ್ ನೀಡಿದ್ದಾರೆ . ಕ್ವಾರಂಟೈನದಲ್ಲಿ ಹೊರ ರಾಜ್ಯದಿಂದ ಆಗಮಿಸಿದವರನ್ನು ಇಡಲು ಬಹಳ ಕಡೆ ಸಾರ್ವಜನಿಕರ ವಿರೋಧ ಕಂಡು ಬಂದಿದೆ. ಆದರೆ ಸತೀಶ ಜಾರಕಿಹೋಳಿ ಅವರು ಸ್ವಂತ ಗೆಸ್ಟ್ ಹೌಸ ನೀಡಿದ ರಾಜ್ಯದ ಅಪರೂಪದ ರಾಜಕಾರಣಿ ಎನ್ನಿಸಿಕೊಂಡಿದ್ದಾರೆ ‌ . ಇದರ ಜೊತೆಗೆ ಯಮಕನಮರಡಿ ಕ್ಷೇತ್ರದ ಶಾಸಕ ಸೂಚನೆ ಮೆರೆಗೆ ಕಾಂಗ್ರೆಸ್ ಮುಖಂಡರಾದ ಕಿರಣಸಿಂಗ್ ರಜಪೂತ ,ಆರ್ ಕೆ.ದೇಸಾಯಿ ಸೇರಿದಂತೆ ಹಲವು ಮುಖಂಡರನ್ನು ಕ್ವಾರಂಟೈನ್ ಸ್ಥಳದಲ್ಲಿ ಇದ್ದು ಅಲ್ಲಿನ ಜನರ ಊಟ ಉಪಚಾರದ ಆರೋಗ್ಯ ತಪಾಸಣೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ .

loading...