ಸ್ವ ಗ್ರಾಮಕ್ಕೆ ಶವ ಒಯ್ಯಲು ನಿರಾಕರಣೆ : ನದಿ ತಟದಲ್ಲಿ ಯುವಕನ ಅಂತ್ಯಕ್ರಿಯೆ

0
45

ಸ್ವ ಗ್ರಾಮಕ್ಕೆ ಶವ ಒಯ್ಯಲು ನಿರಾಕರಣೆ
: ನದಿ ತಟದಲ್ಲಿ ಯುವಕನ ಅಂತ್ಯಕ್ರಿಯೆ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ : ಗುಜರಾತನಲ್ಲಿ ಸಾವನಪ್ಪಿದ ಯುವಕನನ್ನು ಮಹಾರಾಷ್ಟ್ರದ ಮಾರ್ಗವಾಗಿ ಕರ್ನಾಟಕಕ್ಕೆ ಕರೆ ತರುವ ಸಂಧರ್ಭದಲ್ಲಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳಿ ಟೂಲ್ ನಾಕಾ ಬಳಿ ಅಧಿಕಾರಿಗಳು ಶವ ತಗೆದುಕೊಂಡು ಹೋಗಲು ರಾಜ್ಯದಲ್ಲಿ ಪ್ರವೇಶ ನೀಡದ ಕಾರಣ, ಶವಸಂಸ್ಕಾರವನ್ನು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರ ಸಮೀಪದ ದೂಧಗಂಗಾ ನದಿಯ ದಡದಲ್ಲಿ ಕುಟುಂಬಸ್ಥರು ಮತ್ತು ಅಧಿಕಾರಿಗಳು ಅಂತ್ಯಕ್ರಿಯೆ ನೆರವೇರಿಸಿದ ದಾರುಣ ಘಟನೆ ನಡೆದಿದೆ.

ತರುಣ ಅಶೋಕ ಖೇಮಲಾಪುರೆ (23) ಮೃತ ವ್ಯಕ್ತಿ. ಇತ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ನಿವಾಸಿ. ಮೃತ ವ್ಯಕ್ತಿ ಗುಜರಾತ್‍ನಲ್ಲಿ ಕೆಲಸ ಮಾಡುತ್ತಿದ್ದ. ಇತನಿಗೆ ಕಳೆದ ಎರಡು ದಿನಗಳ‌ ಹಿಂದೆ ಅನಾರೋಗ್ಯ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ತರುಣ ಸಾವನಪ್ಪಿದ್ದಾನೆ.

ಶವವನ್ನು ತಮ್ಮ ಸ್ವಂತ ಗ್ರಾಮವಾದ ಬೆಲ್ಲದ ಬಾಗೇವಾಡಿಗೆ ತೆಗೆದುಕೊಂಡು ಹೋಗಲು ಸಂಬಂಧಿಕರೊಂದಿಗೆ ಮೃತನ ತಂದೆ ಅಶೋಕ ಖೇಮಲಾಪುರೆ ನಿರ್ಧರಿಸಿದ್ದರು. ಅದರಂತೆ ತಂದೆ ಅಶೋಕ ತನ್ನ ಮಗನ ಶವವನ್ನು ಗುಜರಾತಿನಿಂದ ಮಹಾರಾಷ್ಟ್ರಕ್ಕೆ ಬಂದು ನಂತರ ನಿಪ್ಪಾಣಿ ತಾಲ್ಲೂಕಿನ ಕೊಗನೊಳಿ ಬಳಿಯ ಚೆಕ್‌ ಪೋಸ್ಟ್‌‌ವರೆಗೆ ತಂದಿದ್ದಾರೆ. ಆದರೆ, ಇ-ಪಾಸ್ ಹಾಗೂ ಸರ್ಕಾರದ ಅನುಮತಿ ಇಲ್ಲದೇ ಬಂದಿದ್ದರಿಂದ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಶವ ತಗೆದುಕೊಂಡು ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಿಲ್ಲ.‌ ಇದರಿಂದ ಮಗನ ಅಂತ್ಯ ಸಂಸ್ಕಾರವನ್ನು ರಾಷ್ಟ್ರೀಯ ಹೆದ್ದಾರಿ 4 ರ ಬಳಿಯಿರುವ ದೂಧಗಂಗಾ ನದಿಯ ದಡದಲ್ಲೇ ನೆರವೇರಿಸಲು ಕುಟುಂಬಸ್ಥರು ನೇರವೆರಿಸಿದ್ದಾರೆ .

ಇನ್ನು ಕುಟುಂಬಸ್ಥರ ನಿರ್ಧಾರಕ್ಕೆ ತಾಲೂಕಾಡಳಿತ ಕೂಡ ಒಪ್ಪಿಗೆ ಸೂಚಿಸಿದ್ದು, ಚಿಕ್ಕೋಡಿ ಡಿವೈಎಸ್ಪಿ ಮನೋಜಕುಮಾರ ನಾಯಿಕ, ಚಿಕ್ಕೋಡಿ ತಾಲ್ಲೂಕಾ ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ, ನಿಪ್ಪಾಣಿ ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ, ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಸಮ್ಮುಖದಲ್ಲಿ ತಂದೆ ಅಶೋಕ ಮಗನ ಶವಕ್ಕೆ ಅಗ್ನಿ ಸ್ಪರ್ಶ ಮಾಡಿ ಅಂತ್ಯ ಸಂಸ್ಕಾರ ನ ನೆರವೇರಿಸಿದ್ದಾರೆ.

loading...