ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿಯವರಿಂದ ನೀರಾವರಿ ಯೋಜನೆಗಳ ಪರಿಶೀಲನೆ

0
16

ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿಯವರಿಂದ ನೀರಾವರಿ ಯೋಜನೆಗಳ ಪರಿಶೀಲನೆ

ಕನ್ನಡಮ್ಮ ಸುದ್ದಿ :ಚಿಕ್ಕೋಡಿ -ಜಿಲ್ಲೆಯ ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ಹಲವು ನೀರಾವರಿ ಯೋಜನೆಗಳ ಸ್ಥಳ ಪರಿಶೀಲನೆ ಯನ್ನು ಜಲಸಂಪನ್ಮೂಲ ಸಚೀವ ರಮೇಶ್ ಜಾರಕಿಹೋಳಿ ಮಾಡಿದರು.

ಅಥಣಿ ತಾಲೂಕಿನ ಅವರಕೋಡ,ಜುಂಝರವಾಡ,ಖಿಳೇಗಾಂವ ಏತನೀರಾವರಿಯ ಅರಳಿಹಟ್ಟಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಅವರಕೋಡ ಮತ್ತು ಕವಟಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ 48 ಕೋಟಿ ವೆಚ್ಚದಲ್ಲಿ ಬಾಂದಾರ್ ಕಮ್ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ನೀರಿನ ಭವನೆ ನೀಗಿಸುವ ಕಾಮಗಾರಿ ನಡೆಯಲಿದೆ .ಮತ್ತು ಖಿಳೆಗಾಂವ ಏತನೀರಾವರಿ ಲಿಪ್ಟ ಇರಿಗೇಷನ್ ಮೂಲಕ ನೀರಾವರಿ ವಂಚಿತ ರೈತರಿಗೆ ಅನುಕೂಲ ಕಲ್ಪಿಸಿ ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ಗ್ರಾಮಗಳಿಗೆ ಅನುಕೂಲ ಮಾಡಲು ಸರ್ಕಾರ ಬದ್ದವಾಗಿದೆ ಎಂದರು.

ಇನ್ನೂ ಶಾಸ್ವತ ಪರಿಹಾರಕ್ಕಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಕುಡಿಯುವ ನೀರಿನ ಒಡಂಬಡಿಕೆ (ಎಮ್ಓಯು) ಬಗ್ಗೆ ಪ್ರತಿಕ್ರಿಯಿಸಿದ ಅವರು ಕೊರೊನಾ ಮಹಾಮಾರಿ ಇಂದಾಗಿ ವಿಳಂಬವಾಗಿದ್ದು ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಜೊತೆ ಚರ್ಚಿಸಿ ಕೃಷ್ಣಾ ನದಿ ನೀರು ಹಂಚಿಕೆಯ ಒಪ್ಪಂದ ಮಾಡಿಕೊಳ್ಳುವದಾಗಿ ಹೇಳಿದರು

ಇದೆ ವೇಳೆ ತಬ್ಲಿಗ್ ಜಮಾತ್,ಅಜ್ಮೇರ್ ನಂಟು ಹಾಗೂ ಜಾರ್ಖಂಡ ಪ್ರವಾಸಿಗರಿಂದ ಕೊರೊನಾ ಹರಡುವಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಕೊರೊನಾ ವೈರಸ್ ಜಾಗತಿಕ ರೋಗವಾಗಿದ್ದು ಅದರ ವಿರುದ್ದ ಎಲ್ಲರೂ ಒಂದಾಗಿ ಹೋರಾಟ ಮಾಡುವ ಅಗತ್ಯ ಇದೆ ಎಂದರು.

ಈ ಸಂಧರ್ಭದಲ್ಲಿ ಅಥಣಿ ಶಾಸಕ ಮಹೇಶ ಕುಮಟೋಳಿ ಸೇರಿದಂತೆ ಇತರರು ಇದ್ದರು .

loading...