ಇಂದು ಬೆಳಗಾವಿಯಲ್ಲಿ ಮತ್ತೆ ೧೩ ಕೊರೊನ ಸೊಂಕಿತ ಪ್ರಕರಣ ಪತ್ತೆ: ತಬ್ಲಿಗ್ ಅಜ್ಮೀರ ಬಳಿಕ ಜಾರ್ಖಂಡ್ ನಂಜು

0
54

ಇಂದು ಬೆಳಗಾವಿಯಲ್ಲಿ ಮತ್ತೆ ೧೩ ಕೊರೊನ ಸೊಂಕಿತ ಪ್ರಕರಣ ಪತ್ತೆ:
ತಬ್ಲಿಗ್ ಅಜ್ಮೀರ ಬಳಿಕ ಜಾರ್ಖಂಡ್ ನಂಜು

ಕನ್ನಡಮ್ಮ ಸುದ್ದಿ -ಚಿಕ್ಕೋಡಿ-  ಕುಂದಾ ನಗರಿಯಲ್ಲಿ ಇಂದು ಕೊರೋನಾ ತನ್ನ ಅಟ್ಟಹಾಸ ಮೆರೆದಿದೆ.ತಬ್ಲಿಗ್ ,ಅಜ್ಮೀರ ನಂಟಿನ ಬಳಿಕ ಈಗ ಜಾರ್ಖಂಡ್ ನಿಂದ ಬೆಳಗಾವಿಗೆ ಮರಳಿದ ಹದಿಮೂರು ಜನರಿಗೆ ಸೊಂಕು ತಗಲಿರುವದು ದೃಡವಾಗಿದೆ. ಈ ಮೂಲಕ  ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 141 ಕ್ಕೆ ಏರಿದಂತಾಗಿದೆ.

ಇಂದಿನ ಮುಂಜಾನೆ ಬುಲಿಟೀನ್ ನಲ್ಲಿ ಬೆಳಗಾವಿಯ 13 ಜನರಿಗೆ ಸೊಂಕು ತಗಲಿದ್ದು ಖಚಿತವಾಗಿದೆ .ಇವರೆಲ್ಲರೂ ಜಾರ್ಖಂಡ್ ರಾಜ್ಯದಿಂದ ಮರಳಿದ್ದರು ಎಂದು ಗೊತ್ತಾಗಿದೆ. ಇದರಲ್ಲಿ ೧೨ ಜನ ಅಥಣಿ ತಾಲೂಕಿನವರು ಸೊಂಕಿತರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿತ್ತು .ಹಾಗು ಇನ್ನೊರ್ವ ಸೊಂಕಿತ ಹುಕ್ಕೇರಿಯವರು ಎಂಬ ಮಾಹಿತಿ ಲಭ್ಯವಾಗಿದೆ .

ತಬ್ಗಿಗ್ ,ಅಜ್ಮೀರ ನಂತರ ಈಗ ಕರುನಾಡಿಗೆ ಜಾರ್ಖಂಡ್ ನಂಜು ಪಸರಿಸುತ್ತಿದೆ. ಇಂದು ದೃಡ ಪಟ್ಟಿರುವ ಬಹುತೇಕ ಸೊಂಕಿತರು ಜಾರ್ಖಂಡ್ ಪ್ರವಾಸದ ಹಿನ್ನಲೆ ಉಳ್ಳವರಾಗಿದ್ದಾರೆ ..

loading...