ಕನ್ನಡ ನಿರ್ಲಕ್ಷ್ಯ ಮಾಡುತ್ತಿರುವ ಸ್ಟೇಟ್‌ಬ್ಯಾಂಕ್ ವಿರುದ್ದ ಕನಸೇ ಪ್ರತಿಭಟನೆ

0
20

ಬೆಳಗಾವಿ
ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ನಿರ್ಲಕ್ಷö್ಯ ಮಾಡುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕನ್ನಡ ವಿರೋಧಿಯನ್ನು ಖಂಡಿಸಿ ಮಗಳವಾರ ಕರ್ನಾಟಕ ನವನಿರ್ಮಾಣ ಸೇನೆ ಪ್ರತಿಭಟನೆ ನಡೆಸಿ ಬ್ಯಾಂಕ್‌ನ ವ್ಯವಸ್ಥಾಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಾಸ್‌ಬುಕ್, ಚಲನ್, ಚೆಕ್ ಬುಕ್‌ಗಳಲ್ಲಿ ಸ್ಥಳಿಯ ಭಾಷೆಯಾದ ಕನ್ನಡವನ್ನು ಕಡೆಗಣಿಸಿ ರಾಷ್ಟç ಭಾಷೆಯ ಹೆಸರಿನಲ್ಲಿ ಬಲವಂತವಾಗಿ ಕನ್ನಡಿಗರ ಮೇಲೆ ಹಿಂದಿ ಹೇರುತ್ತಿರುವ ಬ್ಯಾಂಕ್‌ನ ನಾಡ ದ್ರೋಹದ ಕ್ರಮವನ್ನು ಮನವಿಯಲ್ಲಿ ಖಂಡಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ರಾಜ್ಯ ಮತ್ತು ಆಡಳಿತ ಭಾಷೆಯಾಗಿದೆ. ಇಲ್ಲಿ ವ್ಯವಹಾರ, ಉದ್ಯೋಗ, ಉದ್ಯಮ, ಶಿಕ್ಷಣ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಕನ್ನಡವೇ ಪ್ರಧಾನವಾಗಿರಬೇಕು ಎಂದು ಸರಕಾರ ದಶಕಗಳ ಹಿಂದೆಯೇ ಆದೇಶಿಸಿದೆ. ಈ ರಾಜ್ಯದ ಜನರ ಮಾತೃಭಾಷೆ ಕನ್ನಡ. ಇಲ್ಲಿಯ ವ್ಯವಹಾರದ ಭಾಷೆಯೂ ಕನ್ನಡವೇ ಆಗಿದೆ. ಬ್ರಿಟಿಷ್ ಅಧಿಕಾರಿಗಳು ಸಹ ಇಲ್ಲಿ ಜನರ ಭಾಷೆಯಲ್ಲಿ ತಮ್ಮ ಆಡಳಿತ ಮತ್ತು ವ್ಯವಹಾರವನ್ನು ನಡೆಸಿ ಸ್ಥಳಿಯ ಜನರ ಮೆಚ್ಚುಗೆಗೆ ಪಾತ್ರರಾಘಿದ್ದರು ಎನ್ನುವುದು ಇತಿಹಾಸವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚನ ದಿನಗಳಲ್ಲಿ ತನ್ನ ಎಲ್ಲ ವ್ಯವಹಾರಗಳನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನೇ ಬಳಸುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಭಾಷಾ ಸಮಸ್ಯೆ ಎದುರಾಗುತ್ತಿದೆ. ಬ್ಯಾಂಕ್ ಸಿಬ್ಬಂದಿಗಳಿಗೆ ಸರಿಯಾಗಿ ಕನ್ನಡವೇ ಬರಲ್ಲ. ಕೆಲವೊಂದು ಸಲ ತುಂಬಾ ಉಡಾಫೆಯಾಗಿ ಮಾತನಾಡಿ ಗ್ರಾಹಕರನ್ನು ಅವಮಾನಿಸಿವ ಕೆಲಸ ಮಾಡಿರುವುದನ್ನು ಮನವಿಯಲ್ಲಿ ಖಂಡಿಸಿದ್ದಾರೆ.
ಬ್ಯಾAಕ್‌ನ ಎಲ್ಲ ಪಾಸ್‌ಬುಕ್, ಚೆಕ್ ಬುಕ್, ಎಲ್ಲವೂ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಮುಂದಿಸಿ ಕನ್ನಡಕ್ಕೆ ಅವಮಾನ ಮಾಡಲಾಗುತ್ತಿದೆ. ತ್ರೀ ಭಾಷಾ ಸೂತ್ರದ ಅನ್ವಯ ಸ್ಥಳೀಯ ಭಾಷೆಗೆಎ ಮೊದಲು ಸ್ಥಾನ ಮಾನ ನೀಡಬೇಕು ಎನ್ನುವುದನು ಮರೆತು ಗ್ರಾಹಕರೊಂದಿಗೆ ಅಸಬ್ಯವಾಘಿ ವರ್ತಿಸುತಿದ್ದಾರೆ. ಕೂಡಲೇ 15 ದಿನಗಳ ಒಳಗಾಗಿ ಪ್ರಥಮ ಭಾಷೆಯಾಗಿ ಕನ್ನಡ ಮುದ್ರಿಸಿ ವ್ಯವಹಾರ ನಡೆಸಬೇಕು ಇಲ್ಲದಿದ್ದರೆ ಬ್ಯಾಂಕ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಕನಸೇ ಜಿಲ್ಲಾಧ್ಯಕ್ಷ ಬಾಬು ಸಂಗೋಂಡಿ, ಸುಷ್ಮಾ ಯಾದವಾಡ, ನಾಗರಾಜ ದೊಡಮನಿ, ಮಂಜುನಾಥ ಹುಡೇದ, ಬಸವರಾಜ ದೊಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...