ಅಸ್ವಸ್ಥಗೊಂಡ ಪಿಗ್ಮಿ ಏಜೆಂಟ್‌ ನೇಣು ಬೀಗಿದುಕೊಂಡು ಆತ್ಮಹತ್ಯೆ

0
33

ಅಸ್ವಸ್ಥಗೊಂಡ ಪಿಗ್ಮಿ ಏಜೆಂಟ್‌ ನೇಣು ಬೀಗಿದುಕೊಂಡು ಆತ್ಮಹತ್ಯೆ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ :ಮಾನಸಿಕವಾಗಿ ಅಸ್ವಸ್ಥಗೊಂಡ ಪಿಗ್ಮಿ ಏಜೆಂಟ್‌ನೊರ್ವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಹೊರವಲಯದ ಗದ್ದೆಯಲ್ಲಿ ನಡೆದಿದೆ.

ಐನಾಪೂರ ಪಟ್ಟಣದ ಸಿದ್ದಪ್ಪಾ ನರಸಪ್ಪಾ ಹುದ್ದಾರ(51) ಆತ್ಮಹತ್ಯೆ ಮಾಡಿಕೊಂಡ ಪಿಗ್ಮಿ ಏಜೆಂಟ್. ಕೌಟುಂಬಿಕ ಕಲಹದೊಂದಿಗೆ ಮಾನಸಿಕವಾಗಿ ಅಸ್ವಸ್ಥಗೊಂಡು ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಇನ್ನು ಮೃತ ವ್ಯಕ್ತಿ ಅನೇಕ ವರ್ಷಗಳಿಂದ ಐನಾಪೂರ ಪಟ್ಟಣದ ಶ್ರೀ ಸಿದ್ದೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿಯಲ್ಲಿ ಪಿಗ್ಮಿ ಏಜೆಂಟನಾಗಿ ಕಾರ್ಯ ನಿರ್ವಹಿಸುತ್ತಿದ್ದನು.

ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...