ಎರಡು ವರ್ಷದ ಮಗು ಸೇರಿದಂತೆ ನಾಲ್ಕು ಜನರಿಗೆ ಕೊರೋನಾ ಸೋಂಕು

0
23

ಬೆಳಗಾವಿ

ಬೆಳಗಾವಿಯಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಬುಧವಾರದ ಮಧ್ಯಾಹ್ನದ ಆರೋಗ್ಯ ಬುಲಿಟಿನಲ್ಲಿ ಎರಡು ವರ್ಷದ ಮಗುವಿಗೆ ಸೇರಿದಂತೆ ನಾಲ್ಕು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಬೆಳಗಾವಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಶರವೇಗದಲ್ಲಿ ಹಬ್ಬುತ್ತಿದೆ. ಕೇರಳದಿಂದ ಪಾಲಕರೊಂದಿಗೆ ಆಗಮಿದ್ದ 2 ವರ್ಷದ ಕಂದಮ್ಮ, ಮಹಾರಾಷ್ಟçದಿಂದ ಆಗಮಿಸಿದ್ದ 32ವರ್ಷದ ವ್ಯಕ್ತಿ ಹಾಗೂ 32 ವರ್ಷದ ಮಹಿಳೆ ಮತ್ತು ದೆಹಲಿಯಿಂದ ಆಗಮಿಸಿದ್ದ 28 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಲಾಕ್‌ಡೌನ್ ಬಳಿಕ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆತಿರುವ ಬೆಳಗಾವಿ ಜನತೆ ಇನ್ನು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಬೆಳಗಾವಿ ಇಲ್ಲಿಯವರೆಗೆ ಒಟ್ಟು 147 ಕೊರೋನೊ ಸೋಂಕಿತರಾಗಿದ್ದಾರೆ.

loading...