ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳ ಸಾಗಾಟ -ಇಬ್ಬರ ವಿರುದ್ದ ಪ್ರಕರಣ ದಾಖಲು

0
76

ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳ ಸಾಗಾಟ -ಇಬ್ಬರ ವಿರುದ್ದ ಪ್ರಕರಣ ದಾಖಲು

ಕನ್ನಡಮ್ಮ ಸುದ್ದಿ -ಸಂಕೇಶ್ವರ : ಅಕ್ರಮವಾಗಿ ಪರವಾಣಿಗೆ ಇಲ್ಲದೆ ಕಸಾಯಿಖಾನೆಗೆ ಆಕಳುಗಳ ಸಾಗಾಣಿಕೆಯಲ್ಲಿ ತೊಡಗಿದ್ದ ಇಬ್ಬರ ವಿರುದ್ದ ಸಂಕೇಶ್ವರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಿನ್ನೆ ( ರವಿವಾರ) ನಡೆದಿದೆ .

ಬುಲೇರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮೂರು ಆಕಳು ಒಂದು ಎಮ್ಮೆಯನ್ನು ಕಸಾಯಿಖಾನೆಗೆ ಸಾಗಿಸುತ್ತದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಸಂಕೇಶ್ವರ ಪೋಲಿಸ ದಾಳಿ ನಡೆಸಿ ಗೋಟುರ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಆರೋಪಿತರನ್ನು ಬಂಧಿಸಿದ್ದಾರೆ .

ಆರೋಪಿತರು ಒರ್ವ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಸುಖದೇವ ರಾಮಚಂದ್ರ ನಾರಾಯಣಕರ್ ಹಾಗೂ ಮತ್ತೊರ್ವ ಗೋಟುರ ಗ್ರಾಮದ ಅನ್ವರ ಬೇಪಾರಿ ಎಂಬುವವರ ಮೇಲೆ ” ಕರ್ನಾಟಕ ಪ್ರಿವೇನಶ್ ಆಫ್ ಕೌ ಸ್ಲಾಂಗರ್ ಆಂಡ್ ಕ್ಯಾಟಲ್ ಪ್ರೀವೆನಶನ್ ಆಕ್ಟ್ -೧೯೬೪ ಹಾಗೂ ಇಂಡಿಯನ್ ಮೋಟಾರು ವೆಹಿಕಲ್ ಆಕ್ಟ್ -೧೯೮೮” ಪ್ರಕರಣವನ್ನು ಸಂಕೇಶ್ವರ ಪೋಲಿಸ ಠಾಣೆಯಲ್ಲಿ ದಾಖಲಿಸಲಾಗಿದೆ .

loading...