ಎಸಿಬಿ ಅಧಿಕಾರಿಗಳ ದಾಳಿ : ಬಲೆಗೆ ಬಿದ್ದ ಅಥಣಿ ತಾ ಪಂ ಇಂಜಿನಿಯರ್

0
42

ಎಸಿಬಿ ಅಧಿಕಾರಿಗಳ ದಾಳಿ :
ಬಲೆಗೆ ಬಿದ್ದ ಅಥಣಿ ತಾ ಪಂ ಇಂಜಿನಿಯರ್

ಕನ್ನಡಮ್ಮ ಸುದ್ದಿ -ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಪಂಚಾಯ್ತಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು ,ಲಂಚ ಪಡೆಯುತ್ತಿದ್ದ ಇಂಜಿನಿಯರನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ನಡೆದಿದೆ .

ಅಥಣಿ ತಾಲೂಕು ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್ ಕೃಷಿ ಹೊಂಡ ನಿರ್ಮಾಣದ ಬಿಲ್ಲು ಪಾಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಂಜಿನಿಯರ್ ನಿಂಗಪ್ಪ ಮೊಕಾಶಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ .
ಅಂಬರೀಶ್ ದುಗಾಣಿ ಎಂಬ ರೈತ ನೀಡಿದ ದೂರಿ‌ನನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ .ರೈತನಿಂದ ಇಂಜಿನಿಯರ್ ನಿಂಗಪ್ಪ ಮೊಕಾಶಿ ೬ ಸಾವಿರ ರೂ ಹಣ ಪಡೆಯುವಾಗ ಎಸಿಬಿ ಬಲೆಗೆ ತಾ ಪಂ ಇಂಜೀನಿಯರ್ ಬಿದ್ದಿದ್ದಾನೆ .
ಬೆಳಗಾವಿ ಎಸಿಬಿ ಡಿಎಸ್ಪಿ ಶರಣಪ್ಪ ನೇತೃತ್ವದಲ್ಲಿ ಎಸಿಬಿ ದಾಳಿ ನಡೆದಿದೆ.

loading...