ನಗರ ಪೊಲೀಸ್ ಆಯುಕ್ತರಾಗಿ ಡಾ.ತ್ಯಾಗರಾಜನ್ ನೇಮಕ

0
7

ಬೆಳಗಾವಿ

ನಗರ ಪೊಲೀಸ್ ಕಮಿಷನರ್ ಬಿ.ಎಸ್ . ಲೋಕೇಶ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಶುಕ್ರವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪೊಲಿಸ್ ಆಯುಕ್ತ ಲೋಕೇಶ್ ಕುಮಾರ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ( ಐಎಸ್ ಡಿ) ಡಿಐಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇವರು ತೆರವಾದ ಸ್ಥಾನಕ್ಕೆ ಬೆಂಗಳೂರಿನ ಸಿಐಡಿ ಹಾಗೂ ಆರ್ಥಿಕ ಅಪರಾಧ‌ ವಿಭಾಗದ ಡಿಐಜಿಪಿ ಹಾಗೂ 2006ರ ಬ್ಯಾಚ್‌ ನ ಐಪಿಎಸ್ ಅಧಿಕಾರಿಯಾಗಿರುವ ಡಾ.ಕೆ.ತ್ಯಾಗರಂಜನ್ ಅವರನ್ನು ನೇಮಕ ಮಾಡಲಾಗಿದೆ.
ಕಳೆದ ಒಂದು ವರ್ಷದಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಬಿ.ಎಸ್.ಲೋಕೇಶ್ ಕುಮಾರ್ ಆಡಳಿತ ನಡೆಸಿದ್ದಾರೆ. ಇವರ ಅವಧಿಯಲ್ಲಿ ಚುನಾವಣೆ, ಪ್ರವಾಹ, ಕೇಂದ್ರ ಹಾಗೂ ರಾಜ್ಯದ ಪ್ರಮುಖ ನಾಯಕರು ಆಗಮಿಸಿದ್ದಾರೆ. ಅಲ್ಲದೇ ಇಡಿ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಹರಡುವಿಕೆ ನಿಯಂತ್ರಣ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ನ್ನು ತಮ್ಮ ಕಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅಲ್ಲದೇ ಸದಾಕಾಲವೂ ಬೆಳಗಾವಿ ಜನತೆಯ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ತಮ್ಮ ಕಚೇರಿಯ ಬಾಗಿಲನ್ನು ತೆರೆದಿಟ್ಟುಕೊಳ್ಳುವ ಮೂಲಕ ಬೆಳಗಾವಿ ನಗರ್ ಪೋಲೀಸ್ ಇಲಾಖೆಯನ್ನು ಜನಸ್ನೇಹಿ‌ ಪೊಲೀಸ್ ನ್ನಾಗಿ ಮಾಡಿದ್ದರು.
ಅಲ್ಲದೇ ತಮ್ಮ ಅಧಿನ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿ ಸಮಸ್ಯೆ ಆಗದಂತೆ ನಿಗಾವಹಿಸಲು ಎಲ್ಲ ಎಸಿಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ಮೇಲಿಂದಮೇಲೆ ತಿಳಿಹೇಳುವುದರ ಜತೆಗೆ ಆಡಳಿತ ವ್ಯವಸ್ಥೆ ತಮ್ಮದೇ ಸ್ಟೈಲ್ ನಲ್ಲಿ ಚುರುಕು ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಅಲ್ಲದೇ ‌ಬಹು ಭಾಷಿಕರ ಹಾಗೂ ಸಂಸ್ಕೃತಿಯ ನಗರವಾಗಿರುವ ಬೆಳಗಾವಿ ನಗರದಲ್ಲಿ ಎಲ್ಲ ಸಮುದಾಯದ ಜನರನ್ನು ‌ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಿದ್ದಾರೆ.

loading...