ನಾಡಪ್ರಭು ಕೆಂಪೇಗೌಡ ಜಯಂತಿ: ಮುಖ್ಯಮಂತ್ರಿ, ಗಣ್ಯರಿಂದ ಶುಭಾಶಯ

0
14

ಬೆಂಗಳೂರು:-ನಾಡಪ್ರಭು ಕೆಂಪೇಗೌಡ ಜಯಂತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. ತಮ್ಮ ಮಹಾಪ್ರಯತ್ನ ಮತ್ತು ದೂರದೃಷ್ಟಿಗಳಿಂದ ಸುಂದರ, ಸುರಕ್ಷಿತ ಹಾಗು ಶ್ರೇಷ್ಠ ವಾತಾವರಣದ ಸುಸಜ್ಜಿತ ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ಆದರ್ಶ ಅರಸ ಕೆಂಪೇಗೌಡರನ್ನು ನಾಡು ಎಂದೂ ಮರೆಯುವುದಿಲ್ಲ. ಪ್ರಜಾಪಾಲನೆ ಮತ್ತು ಜನಸೇವೆಯ ಅವರ ಸಾಧನೆಗಳು ಚಿರಂತನವಾಗಿವೆ ಎಂದು ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ಕನ್ನಡ ನಾಡಿನ ಹೆಮ್ಮೆಯ ದೊರೆ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ನೂರಾರು ವರ್ಷಗಳ ಹಿಂದೆಯೇ ಮಾದರಿ ಆಡಳಿತಕ್ಕೆ ಹೆಸರು ಮಾಡಿದ್ದರು. ಅಭಿವೃದ್ಧಿ ಕಾರ್ಯಗಳಿಂದಲೇ ಜನಮಾನಸದಲ್ಲಿ ಅಮರರಾಗಿರುವ ಇವರು ಇಂದಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ ಮಾಡಿ, ಕೆಂಪೇಗೌಡರಿಗೆ ಕೆಂಪೇಗೌಡರೇ ಸಾಟಿ’ ಎನ್ನುವಂತೆ ಸರಿಸಾಟಿಯಿಲ್ಲದ ಆದರ್ಶರಾಜ, ಜಾಗತಿಕವಾಗಿ ಮನ್ನಣೆ ಪಡೆದಿರುವ ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟು, ಸಾವಿರಾರು ಕರೆಕಟ್ಟೆಗಳನ್ನು ನಿರ್ಮಿಸಿ ನಗರಕ್ಕೆ ಜಲಮೂಲ ನೀಡಿದ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯಂದು ಆ ಮಹಾನ್ ನಾಯಕನಿಗೆ ಕೋಟಿ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟ್ವೀಟ್, ಬೆಂಗಳೂರು ನಿರ್ಮಾತೃ, ನಮ್ಮ ನೆಚ್ಚಿನ ನಾಡಪ್ರಭುಗಳಾದ ಕೆಂಪೇಗೌಡರ ಜಯಂತಿಯಂದು ಶತಕೋಟಿ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಧೈರ್ಯ, ಸಾಹಸ, ರಾಷ್ಟ್ರಪ್ರೇಮ, ನಿಸ್ವಾರ್ಥ ಗುಣಗಳಿಂದಲೇ ಪ್ರಜೆಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ನಾಡಪ್ರಭು‌ ಶ್ರೀ ಕೆಂಪೇಗೌಡರ ಜನ್ಮದಿನದಂದು‌ ಅವರಿಗೆ ಶತಶತ ನಮನಗಳು ಎಂದು ತಿಳಿಸಿದ್ದಾರೆ.

loading...