ಎಪಿಎಂಸಿ ಕ್ರೆಡಿಟ್ ಯಾರಿಗೆ ಸಲ್ಲುತ್ತೆ ? – ಸಾಹುಕಾರ್ ಜಾರಕಿಹೊಳಿ, ಹೆಬ್ಬಾಳ್ಕರ್ ನಡುವೆ ಗುದ್ದಾಟ

0
162

ಬೆಳಗಾವಿ ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ ಆಗಲು ಬಿಜೆಪಿಯ ಕಾಣದ ಕೈ ಕೆಲಸ ಮಾಡಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹೆಬ್ಬಾಳ್ಕರ್ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪ್ರತ್ಯುತ್ತರ ನೀಡಿದ್ದಾರೆ.
ಸೋಮವಾರ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್ ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ ಆಯ್ಕೆಯ ಹಿಂದೆ ಬಿಜೆಪಿಯ ಕಾಣದ ಕೈ ಕೆಲಸ ಮಾಡಿರುವುದು ನಾನೇ. ಅದನ್ನು ಮುಂದಿನ ದಿನಗಳಲ್ಲಿ ಯಾಕೆ ಎಂಬುದನ್ನು ತೋರಿಸಿಕೊಡುತ್ತೇನೆ ಎಂದರು.
ಯುವರಾಜ್ ಕದಂನನ್ನು ಎಪಿಎಂಸಿ ಅಧ್ಯಕ್ಷನನ್ನಾಗಿ ಮಾಡಿದ್ದು ನಾನೇ. ಬಿಜೆಪಿಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತ. ಬಿಜೆಪಿ ಹೈಕಮಾಂಡ್, ರಾಷ್ಟಿçÃಯ ಹಾಗೂ ರಾಜ್ಯಾಧ್ಯಕ್ಷರ ಆದೇಶವನ್ನು ನಾನು ಪಾಲನೆ ಮಾಡುತ್ತೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬರುವುದಾದರೆ ಹೈಕಮಾಂಡ್ ಆದೇಶದಂತೆ ಕೆಲಸ ಮಾಡುವೆ ಎಂದರು.
ಬೆಳಗಾವಿ ಎಪಿಎಂಸಿಯಲ್ಲಿ ಬಿಜೆಪಿಯ ಒಬ್ಬರೇ ಸದಸ್ಯರಿದ್ದಾರೆ. ಮುಂದಿನ ದಿನದಲ್ಲಿ ನಾವು ಅದನ್ನು ಏಕೆ ನಿರ್ಲಕ್ಷö್ಯ ಮಾಡಿದ್ದೇವೆ ಎನ್ನುವುದು ಮುಂದೆ ತಿಳಿಯುತ್ತದೆ. ಗ್ರಾಮೀಣ ಕ್ಷೇತ್ರದ ಬಗ್ಗೆ ಯಾಕೆ ಮಾಧ್ಯಮದವರು ಪದೇ ಪದೇ ಪ್ರಶ್ನೆ ಮಾಡುತ್ತಿರಿ ಎಂದು ಪ್ರಶ್ನಿಸಿದ ಅವರು, ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್ ಅವರಿಗೆ ಸವಾಲು ಹಾಕಿದ್ದನ್ನು ಅವರು ಸ್ವೀಕರಿಸಿದ್ದಾರೆ. ಶಾಸಕರಾಗಿ ಮಾಡುವುದು ಅವರ ಧರ್ಮ. ಒಂದು ಈರವೆ ತೊಂದರೆ ಕೊಟ್ಟರೆ ಕಡಿಯುತ್ತದೆ. ಅದು ಓಡಿ ಹೋಗಬೇಕಾ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 2012-13ಕ್ಕೆ ಹಿಂದೆ ಹೋಗಿ ನೋಡಬೇಕು. ಸಂಜಯ ಪಾಟೀಲ ಶಾಸಕರಿದ್ದಾಗ ಸಾಕಷ್ಟು ಶ್ರಮಪಟ್ಟಿದ್ದಾರೆ ಎಂದು ಹೆಬ್ಬಾಳ್ಕರ್‌ಗೆ ಟಾಂಗ್ ಕೊಟ್ಟರು.
ವಿರೋಧಪಕ್ಷವರು ಜೀವಂತ ಇದ್ದೇವೆ ಎಂದು ತೋರಿಸಿಕೊಳ್ಳಲು ಪೆಟ್ರೋಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಎಷ್ಟು ಬಾರಿ ಪೆಟ್ರೋಲ್ ದರ ಏರಿಕೆ ಮಾಡಿದ್ದಾರೆ ಎಂದು ನಮಗೆ ಗೊತ್ತಿದೆ. ಅದು ಕೇಂದ್ರ ಸರಕಾರದ ಆದೀನದಲ್ಲಿ ಬರುವುದಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದನ್ನು ಸರಿಪಡಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದವರು ಸಚಿವರನ್ನಾಗಿ ಮಾಡುವುದು ಹಾಗೂ ಎಚ್.ವಿಶ್ವನಾಥ ಅವರ ವಿಷಯ ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಷಯ. ಅವರು ಅತಂತ್ರವಾಗಲು ಸಾಧ್ಯವಿಲ್ಲ. ನಾವು ಅವರಿಗೆ ದೈರ್ಯ ತುಂಬಿದ್ದೇವೆ ಎಂದರು.
ಹುಕ್ಕೇರಿ ಹಿರಿಯ ಶಾಸಕ ಉಮೇಶ ಕತ್ತಿ ಅವರು ಈ ಬಾರಿಯ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳ್ಳಿಸುವುದಕ್ಕೆ ಹೈಕಾಂಡ್ ನಿರ್ಣಯಕ್ಕೆ ಕತ್ತಿ ಅವರು ಹಾಗೂ ನಾವು ಬದ್ದರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿ ಎಪಿಎಂಸಿಯಲ್ಲಿ ಕೇವಲ ಒಬ್ಬರೆ ಬಿಜೆಪಿ ಸದಸ್ಯರಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಸಮಾಧಾನ ಪಡುವ ಅಗತ್ಯ ಇಲ್ಲ. ಬರುವ ದಿನಗಳಲ್ಲಿ ನಾವು ಏನೆಂಬುದನ್ನು ತೋರಿಸುತ್ತೇವೆ. ಯುವರಾಜ್ ಕದಂಗೆ ಅಧ್ಯಕ್ಷ ಮಾಡಿದ್ದು ನಾನೇ.
-ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

 

ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ ಅವರನ್ನು ನಾನೇ ಮಾಡಿದ್ದು ಎಂದು ಹೇಳಿಕೆ ನೀಡಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಚೈಲ್ಡಿಸ್ಟ್ ಪ್ರತಿಕ್ರಿಯೆಗೆ ನಾನು ಉತ್ತರ ಕೊಡುವುದಿಲ್ಲ. ಕಾಂಗ್ರೆಸ್ ನನಗೆ ಜವಾಬ್ದಾರಿ ಸ್ಥಾನ ನೀಡಿದೆ. ನಾನು ಅದನ್ನು ನಿಭಾಯಿಸುತ್ತೇನೆ.
-ಲಕ್ಷಿö್ಮÃ ಹೆಬ್ಬಾಳ್ಕರ್, ಶಾಸಕಿ

 

loading...