ಪಿಎಂಸಿ ವಿರುದ್ದ ಗುಡುಗಿದ ಜೋಡೆತ್ತುಗಳು

0
241

ಬೆಳಗಾವಿ
ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ಸಿಟಿಯಲ್ಲಿ ಬೆಳಗಾವಿ ಸ್ಮಾರ್ಟ್ಸಿಟಿಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪಿಎಂಸಿ ಕಂಪನಿ ನಕಲಿ ಇದೆ. ಇವರಿಂದ ಯಾವ ಅಭಿವೃದ್ದಿಯೂ ಆಗುತ್ತಿಲ್ಲ. ಕೆಲಸ ಮಾಡದ ಸಿಬ್ಬಂದಿಗಳನ್ನು ಅಮಾನತ್ತು ಮಾಡಬೇಕೆಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಎಚ್ಚರಿಸಿದರು.
ಸೋಮವಾರ ಬೆಳಗಾವಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕರೆಯಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಬೆಳಗಾವಿಯ ಅಂದವನ್ನು ಹದಗೇಡಿಸುತ್ತಿರುವ ಬೆಳಗಾವಿ ಸ್ಮಾರ್ಟ್ಸಿಟಿಯ ಪಿಎಂಸಿ ಕಂಪನಿಯವರು ೧೦೦ ಮೀಟರ್ ರಸ್ತೆಯನ್ನು ನಿರ್ಮಿಸಲು ಖಾಸಗಿ ಸಿಬ್ಬಂದಿಗಳು ಎರಡರಿಂದ ಮೂರು ವರ್ಷ ತೆಗೆದುಕೊಳ್ಳುತ್ತಿದ್ದಾರೆ. ಅವರು ಮಾಡಿರುವ ರಸ್ತೆಯಲ್ಲಿ ಅದೇಷ್ಟೋ ಜನರಿಗೆ ಹಾನಿಯಾಗಿದೆ. ಇಷ್ಟೋಂದು ಬೇಜವಾಬ್ದಾರಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಎಂದು ಸ್ಮಾರ್ಟ್ಸಿಟಿಯ ಅಧಿಕಾರಿಗಳು ತಾಕೀತು ಮಾಡಿದರು.
ಇದಕ್ಕೆ ದ್ವನಿಗೂಡಿಸಿದ ಶಾಸಕ ಅನಿಲ್ ಬೆನಕೆ, ಸ್ಮಾರ್ಟ್ಸಿಟಿ ಯೋಜನೆಯನ್ನು ಪಿಎಂಸಿ ಕಂಪನಿಯವರು ಬೇಕಾಬಿಟ್ಟಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ಯೋಜನೆ ಪ್ರಾರಂಭವಾಗಬೇಕಾದರೆ ತಿಳಿಸುವುದಿಲ್ಲ. ಕಾಮಗಾರಿ ಕ್ಯಾನ್ಸಲ್ ಆಗಿದ್ದು, ಹೇಳುವುದಿಲ್ಲ. ಕೆಲಸ ಮಾಡದ ಖಾಸಗಿ ಕಂಪನಿಗಳು ಮುಲಾಜಿಲ್ಲದೆ ತೆಗೆದು ಹಾಕುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಸ್ಮಾರ್ಟ್ಸಿಟಿಯ ಯೋಜನೆಯಲ್ಲಿ ಕಾಮಗಾರಿಗಳು ಪಿಎಂಸಿಯಿAದಲೇ ಹದಗೇಟ್ಟಿರುವ ಕುರಿತಾಗಿ ಕನ್ನಡಮ್ಮ ದಿನಪತ್ರಿಕೆ ಹಾಗೂ ಕೆಎನ್‌ಎನ್ ಸಿಟಿ ನ್ಯೂಸ್ ನಿರಂತರವಾಗಿ ಸುದ್ದಿಗಳನ್ನು ಬಿತ್ತರಿಸಿದ್ದನ್ನು ಶಾಸಕ ಅಭಯ ಪಾಟೀಲ ಹಾಗೂ ಅನಿಲ್ ಬೆನಕೆ ಪಾಲಿಕೆಯ ಸಭೆಯಲ್ಲಿ ಧ್ವನಿ ಎತ್ತಿದರು.

loading...