ಉಳ್ಳಾಗಡ್ಡಿ ಖಾನಾಪುರಕ್ಕೆ ಕಾಲಿಟ್ಟ ಕೊರೊನ ಸೊಂಕು

0
164

ಉಳ್ಳಾಗಡ್ಡಿ ಖಾನಾಪುರಕ್ಕೆ ಕಾಲಿಟ್ಟ ಕೊರೊನ ಸೊಂಕು

ಕನ್ನಡಮ್ಮ ಸುದ್ದಿ-ಸಂಕೇಶ್ವರ – ಸಮೀಪದ ಉಳ್ಳಾಗಡ್ಡಿ ಖಾನಾಪೂರ ಗ್ರಾಮದ ಮೂವರಲ್ಲಿ ಕೊರೊನ ಸೊಂಕು ಪತ್ತೆಯಾದ ಹಿನ್ನಲೆ ಗ್ರಾಮದ ಸೊಂಕಿತ ಮೂವರನ್ನು ಆರೋಗ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಸಿಬ್ಬಂದಿಗಳು ಸೊಂಕಿತರನ್ನ ಬೆಳಗಾವಿ ಕೊವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ .

ಸೊಂಕಿತರಲ್ಲಿ ಓರ್ವ ಮಾಜಿ ಸೈನಿಕ ಗ್ರಾಮದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾನೆ ,ಮಹಿಳೆ ಒರ್ವಳು, ಹಾಗೂ ಇನೊರ್ವ ಸೈನಿಕ ಇಂಪಾಲದಿಂದ ಕಲ್ಕತ್ತಾ ಮಾರ್ಗವಾಗಿ ಗ್ರಾಮಕ್ಕೆ ಜೂನ್ ೧೩ ರಂದು ಆಗಮಿಸಿದ್ದನು. ಆತನನ್ನು ಗ್ರಾಮದ ಹೊರವಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು .ಹಾಲಿ ಸೈನಿಕನಿಗೆ ಮಾರ್ಗ ಮದ್ಯ ಸೊಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇನ್ನುಳಿದ ಇಬ್ಬರಿಗೆ ಹೇಗೆ ಸೊಂಕು ತಗುಲಿದೆ ಎಂಬುವುದು ಇನ್ನು ತಿಳಿದು ಬಂದಿಲ್ಲ .

ಹುಕ್ಕೇರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಉದಯ ಕುಡಚಿ ,ಡಾ.ವಿದ್ಯಾ ಐಗಳಿ, ಆರೋಗ್ಯ ನಿರೀಕ್ಷಕ ಸಂಜು ಕೋಳಿ ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ನಾರಾಯಣ ಹಾಗೂ ಗ್ರಾಮ ಪಂಚಾಯತಿ ಅದ್ಯಕ್ಷ ಸುಧೀರ ಗಿರಿಗೌಡರ ಸಭೆ ನಡೆಸಿದ್ದು , ಗ್ರಾಮದ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ,ಮಾಸ್ಕ ಧರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದು ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಚರ್ಚೆ ನಡೆಸಿದ್ದಾರೆ .

loading...