ಡಿಕೆಶಿ ಸಾಮರ್ಥ್ಯ ನೋಡಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ: ರಾಮುಲು ಟೀಕೆಗೆ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೋಳಿ ಟಾಂಗ್

0
116

ಡಿಕೆಶಿ ಸಾಮರ್ಥ್ಯ ನೋಡಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ: ರಾಮುಲು ಟೀಕೆಗೆ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೋಳಿ ಟಾಂಗ್

ಕನ್ನಡಮ್ಮ ಸುದ್ದಿ -ಚಿಕ್ಕೋಡಿ : ಕಾಂಗ್ರೆಸ್ ಪಕ್ಷದ ನೂತನ ಕಾರ್ಯಾದ್ಯಕ್ಷರಾಗಿ ಆಯ್ಕೆಯಾದ ಯಮಕನಮರಡಿ ಶಾಸಕ ಸತೀಶ ಜಾರಕಿಹೋಳಿ ಮೊದಲ ಬಾರಿಗೆ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ನೂತನ ಕಾರ್ಯದ್ಯಕ್ಷರನ್ನ ಸ್ವಾಗತಿಸಿದರು .
ಚಿಕ್ಕೋಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸತ್ಕಾರ ಕಾರ್ಯಕ್ರಮ ನಡೆಯಿತು .ಕಾರ್ಯದ್ಯಕ್ಷರಾಗಿ ಆಗಮಿಸಿದ ಸತೀಶ ಜಾರಕಿಹೋಳಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಹೊ ಗುಚ್ಚೆ ನೀಡಿ ಸತ್ಕರಿಸಿ ,ಸ್ವಾಗತ ಮಾಡಿಕೊಂಡರು.
ಕಾರ್ಯದ್ಯಕ್ಷರ ಸತ್ಕಾರದ ವೇಳೆ ಹೆಚ್ವಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು ,ಸಾಮಾಜಿಕ ಅಂತರ ಎಂಬುವುದು ಕಾರ್ಯಕ್ರಮದಲ್ಲಿ ಮರಿಚಿಕೆಯಾಗಿತ್ತು .

ಕಾರ್ಯಕ್ರಮದ ಬಳಿಕ ನೂತನ ಕಾರ್ಯದ್ಯಕ್ಷ ಸತೀಶ ಜಾರಕಿಹೋಳಿ ಮಾದ್ಯಮದವರ ಜೊತೆ ಮಾತನಾಡಿದರು . ಡಿಕೆ ಶಿವಕುಮಾರ ಜೈಲಿಗೆ ಹೋಗಿ ಬಂದವರು ಅವರಿಂದ ಹೇಗೆ ಪಕ್ಷ ಕಟ್ಟಲಾಗುತ್ತದೆ ಎಂಬ ಸಚಿವ ರಾಮುಲು ಟೀಕೆಯ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೋಳಿ ನೂತನ ಕೆಪಿಸಿಸಿ ಅದ್ಯಕ್ಷರು ಜೈಲಿಗೆ ಹೋಗಿ ಬಂದಿದ್ದು ಒಂದು ಅಪ್ರಸ್ತುತ ಬಹಳ ಜ‌ನ ಜೈಲಿಗೆ ಹೋಗಿ ಬಂದಿದ್ದಾರೆ , ಅವರ ಸಾಮರ್ಥ್ಯ ಹಾಗೂ ಸೇವೆ ನೋಡಿ ಅವರಿಗೆ ಅದ್ಯಕ್ಷ ಸ್ಥಾನ ನೀಡಲಾಗಿದೆ .ಡಿಕೆ ಶಿವಕುಮಾರ ಅವರು ಉತ್ಸಾಹಿ ಇದ್ದಾರೆ ,ಅವರ ಜೊತೆ ಸೇರಿ ನಾವೆಲ್ಲ ಪಕ್ಷ ಕಟ್ಟುವ ಕಾರ್ಯ ಮಾಡಲಿದ್ದೆವೆ,ಮುಂದಿನ ಚುನಾವಣಾಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು .

ಈ ವೇಳೆ ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾದ್ಯಕ್ಷ ಲಕ್ಷ್ಮಣರಾವ್ ಚಿಂಗಳೆ , ಶಾಸಕರಾದ ಗಣೇಶ ಹುಕ್ಕೇರಿ ಮುಖಂಡರಾದ ಕಾಕಾಸಾಹೇಬ ಪಾಟೀಲ ,ವೀರಕುಮಾರ ಪಾಟೀಲ , ಡಾ.ಎನ್ ಎ ಮಗದುಮ್ಮ ,ಮಹಾವೀರ ಮೋಹಿತೆ , ಮಹೇಶ ಹಟ್ಟಿಹೋಳಿ , ಮಹಾದೇವ ಕೌಲಾಪುರ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಬ್ಲಾಕ್ ಅದ್ಯಕ್ಷ ಇದ್ದರು .

loading...