ಕಳೆದ ಚುನಾವಣೆ ಕುಕ್ಕರ ನಂದೆ ಎಂದ ಸಚಿವರು

0
28
 • ನನ್ನ ದುಡ್ಡಲಿ ಲಕ್ಷ್ಮೀ ಜಾತ್ರೆ ಮಾಡಿದ್ದಾರೆ: ರಮೇಶ
  ಕಳೆದ ಚುನಾವಣೆ ಕುಕ್ಕರ ನಂದೆ ಎಂದ ಸಚಿವರು
  ಬೆಳಗಾವಿ:
  ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಜಾತ್ರೆಗೆ ಕುಕ್ಕರ ನಾನೆ ಕೊಟ್ಟಿದ್ದಿನಿ, ಮುಂದಿನ ಚುನಾವಣೆ ಜಾತ್ರೆ ನಾವೆ ಮಾಡತ್ತಿವಿ, ಅಂದರೆ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಸತ್ತಿವಿ ವೆಟ್ ಆಂಡ್ ಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರಗೆ ಸೂಚನೆ  ನೀಡಿದರು.
   ಹಿಂಡಲಗಾ ಗ್ರಾಮದ ವಿಜಯನಗರದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳದ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ,
  ಈ ಕ್ಷೇತ್ರದಲ್ಲಿ ಮುಂದಿನ ಸಲ್  ಬಿಜೆಪಿ ನೆಲೆಯೂರಲಿದೆ ಇದಕ್ಕೆ ನಾನು ಸಾಕ್ಷಿ ದಿಟ್ಟವಾಗಿ ನುಡಿದರು.
   ಈ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಣಿಸಲು ರಮೇಶ ಜಾರಕಿಹೊಳಿ ರಣತಂತ್ರ ಶುರು ಮಾಡಿದ್ದಾರೆ.
  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 2023ಕ್ಕೆ ಹೊಸ ಇತಿಹಾಸವನ್ನು ಸೃಷ್ಟಿಸಬೇಕಿದೆ. ಇಡೀ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ವನಾಶ ಮಾಡುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗಿದೆ. ಗ್ರಾಮೀಣ ಭಾಗದ ಶಾಸಕರಿಗೆ ಹಣದ ಗಮಂಡಿಯಿದೆ. ಅವರಿಗೆ ಗಮಂಡಿ ತೋರಿಸಲು ನಾನು ಸಿದ್ಧನಿದ್ದೇನೆ. ಗ್ರಾಮೀಣ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಕ್ಯಾಂಡಿಡೇಟ್‍ಗಳಿಗೆ ದುಡ್ಡು ಕೊಡುತ್ತಿದ್ದಾರೆ ಎಂದು ಕೇಳಿದ್ದೇನೆ. ಅವರು ಎಷ್ಟು ದುಡ್ಡು ಕೊಡುತ್ತಾರೊ ಅದಕ್ಕಿಂತ ಡಬಲ್ ದುಡ್ಡು ಕೊಡಲು ನಾವು ಸಿದ್ಧರಿದ್ದೇವೆ. ಇದು ಸೊಕ್ಕಿನ ಮಾತಲ್ಲ. ನಾವು ಬೆವರು ಸುರಿಸಿ ದುಡಿದ ರೊಕ್ಕ ಕೊಡುತ್ತೇವೆ.
  ಬಳಿಕ ಕೇಂದ್ರ ಸಚಿವ ಸುರೇಶ ಅಂಗಡಿ ಮಾತನಾಡಿ ಓರ್ವ ಕಾರ್ಯಕರ್ತ ಈ ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಆಗುವಂತಹ ಅವಕಾಶ ಇರುವಂತಹ ಏಕೈಕ ಪಕ್ಷ ಇದ್ದರೆ ಅದು ಬಿಜೆಪಿ ಪಕ್ಷ ಮಾತ್ರ. ಬಿಜೆಪಿ ವರಿಷ್ಠರು ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಕರೆ ನೀಡಿದರು.
loading...