ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆಗಳ ಶೆಲ್ ದಾಳಿ, ಮಹಿಳೆ ಸಾವು. ಮತ್ತೊಬ್ಬರಿಗೆ ಗಾಯ

0
11

ಜಮ್ಮು:- ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಮುಂಚೋಣಿ ಗ್ರಾಮಗಳ ಮೇಲೆ ಪಾಕಿಸ್ತಾನ ಪಡೆಗಳು ಬುಧವಾರ ಬೆಳಗಿನ ಜಾವ ನಡೆಸಿದ ಅಪ್ರಚೋದಿತ ಗುಂಡು ಹಾಗೂ ಶೆಲ್ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ

ಪೂಂಚ್ ಜಿಲ್ಲೆಯ ಬಾಲ್ ಕೋಟ್ ಹಾಗೂ ಮೆಂಧರ್ ವಲಯದ ಗಡಿನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಪಡೆಗಳು ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋಧಿತ ದಾಳಿ ನಡೆಸಿದವು ಎಂದು ಅಧಿಕೃತ ಮೂಲಗಳು ಹೇಳಿವೆ.

ಪಾಕ್ ಪಡೆಗಳ ದಾಳಿಗಳಿಗೆ ಭಾರತೀಯ ಪಡೆಗಳು ತಕ್ಕ ಪ್ರತಿದಾಳಿಯ ಮೂಲಕ ಪ್ರತಿಯುತ್ತರ ನೀಡಿದ್ದು ಗುಂಡಿನ ಚಕಮಕಿ ಸುಮಾರು ಮುಕ್ಕಾಲು ತಾಸು ನಡೆಯಿತು. ಗಡಿಯಾಚೆಯಿಂದ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟು ಮತ್ತೊಬ್ಬ ನಾಗರೀಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.ಗುಂಡಿನ ದಾಳಿಯಿಂದ ಒಬ್ಬರು ನಾಗರೀಕರು ಸ್ಥಳದಲ್ಲಿ ಮೃತಪಟ್ಟರೆ, ಮತ್ತೊಬ್ಬ ನಾಗರೀಕ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ದೃಢಪಡಿಸಿದ್ದಾರೆ.

ಮೃತ ಮಹಿಳೆಯನ್ನು ಮಂಧೆರ್ ವಲಯದ ಲಂಜೊಟೆಯ ಮಹಮದ್ ಆಜಂ ಎಂಬುವರ ಪತ್ನಿ ರಾಷಂ ಬೀ(೬೦) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮಹಮದ್ ಷರೀಪ್ ಪತ್ನಿ ಹಕೀಂ ಬೀ ( ೫೮) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

loading...