ವಿಧಾನ ಪರಿಷತ್ ಚುನಾವಣಾಗೆ ಸ್ಪರ್ಧೆ – ಪ್ರಕಾಶ ಹುಕ್ಕೇರಿ ಸುಳಿವು

0
300
  • ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ – ಪ್ರಕಾಶ ಹುಕ್ಕೇರಿ ಸುಳಿವು

ಕನ್ನಡಮ್ಮ ಸುದ್ದಿ -ಚಿಕ್ಕೋಡಿ ೦೮: ಮಾಜಿ ಇದ್ದವರು ಹಾಲಿ ಆಗ್ತಾರೇ, ಹಾಲಿ ಇದ್ದವರು ಮಾಜಿ ಆಗ್ತಾರೇ ಎನ್ನುವ ಮೂಲಕ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ವಿಧಾನ ಪರಿಷತ್ ಪ್ರವೇಶಿಸುವ ಸುಳಿವು ನೀಡಿದ್ದಾರೆ.

ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ಪದ್ಮಾವತಿ ಕೆರೆ ತುಂಬುವ ೫ ಕೋಟಿ ವೆಚ್ಚದ ಯೋಜನೆಯನ್ನು ಲೋಕಾರ್ಪಣೆಗೊಳಿಸಿ
ಮಾತನಾಡಿದ ಅವರು, ಈಗ ಮಾಜಿ ಇದ್ದೇವೆ ಅಂತ‌ ನನ್ನ ಹಾಗೂ ಕಾಕಾಸಾಹೇಬ ಪಾಟೀಲ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಇಂದು ಮಾಜಿಯಾಗಿರುವ ನಾವು ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರವೇಶಿಸಿ ಹಾಲಿಯಾಗುತ್ತೇವೆ. ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಿದ್ದೇವೆ ರಾಜಕೀಯ ಮಾಡಿಲ್ಲ ಎಂದರು.

ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಈ ಯೋಜನೆ ನಿರಂತರವಾಗಿ ಚಾಲನೆಯಲ್ಲಿರಬೇಕು. ಅಧಿಕಾರ ಇರುತ್ತೆ, ಹೋಗತ್ತೆ ಆದರೆ ನಾವು ಮಾಡಿದ ಕಾರ್ಯಕ್ರಮಗಳು ನಿರಂತರವಾಗಿರಬೇಕು. ಇಲ್ಲದಿದ್ದರೆ ವಿರೋಧಿ ಪಕ್ಷಗಳಿಗೆ ಆಹಾರವಾಗಿರಬೇಕು.

ಅಧಿಕಾರ ಇದ್ದಾಗ ಏನು ಮಾಡದ ಪ್ರತಿಪಕ್ಷ ಈಗ ಮಾತನಾಡುತ್ತೊದ್ದಾರೆ. ಮಹಾಲಕ್ಷ್ಮಿ ಯೋಜನೆಗೆ ಕಾಕಾಸಾಹೇಬ ಪಾಟೀಲ ಚಾಲನೆ ಕೊಟ್ಟಿದ್ದರು. ಆದರೆ ಕೃಷ್ಣಾ ನದಿಗೆ ನೀರು ಹಂಚಿಕೆ ವಿಳಂಬವಾಗಿದ್ದರಿಂದ ಯೋಜನೆ ಅನುಷ್ಠಾನಕ್ಕೆ ತಡವಾಗಿದೆ.

ಶಾಸಕ ಗಣೇಶ ಹುಕ್ಕೇರಿ, ಜೋಡಕುರಳಿ, ಕಾಡಾಪೂರ, ನಾಯಿಂಗ್ಲಜ, ಪಟ್ಟಣಕುಡಿ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಕೇವಲ ಒಂದೇ ವರ್ಷದಲ್ಲಿ ಐದು ಕೋಟಿ ವೆಚ್ಚದ ಯೋಜನೆ ಪೂರ್ಣಗೊಳಿಸಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.

ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಅಭಿವೃದ್ಧಿ ವಿಷಯದಲ್ಲಿ ಪ್ರಕಾಶ ಹುಕ್ಕೇರಿ ಹೆಜ್ಜೆಯಲ್ಲಿ ಗಣೇಶ ಹುಕ್ಕೇರಿ ಹೆಜ್ಜೆಯಿಟ್ಟಿದ್ದಾರೆ. ೧೯೮೮ರ ನಂತರ ವಿಧಾನ ಪರಿಷತ್ ಸದಸ್ಯರಾದ ಬಳಿಕ ಪ್ರಕಾಶ ಹುಕ್ಕೇರಿ ಈಭಾಗದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದರು. ಆದರೆ ಚುನಾವಣೆಯಲ್ಲಿ ಅಭಿವೃದ್ಧಿಗೆ ತಕ್ಕ ಬೆಂಬಲ ಅವರಿಗೆ ಸಿಗುತ್ತಿಲ್ಲ ಎಂದರು.

ಗ್ರಾಪಂ ಅಧ್ಯಕ್ಷ ವಿನೋದ ಕಾಗೆ ಮಾತನಾಡಿದರು.

ಜಿಪಂ ಸದಸ್ಯೆ ಶೈಲಜಾ ಕಾಗೆ, ತಾಪಂ ಸದಸ್ಯೆ
ರೂಪಾಲಿ ಮಾಳಿ, ವಿಜಯ ಪಾಟೀಲ, ಅನೀಲ‌ ನಾಯಿಕ ಉಪಸ್ಥಿತರಿದ್ದರು.

loading...