ಹೆಬ್ಬಾಳ್ಕರ್ ಗೆ ಸವಾಲ್ ಹಾಕಿದ ಸಚಿವ ಜಾರಕಿಹೊಳಿ

0
15

ಬೆಳಗಾವಿ

ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚಿದ್ದು ಯಾರ ದುಡ್ಡಿಂದ ಅಂತಾ ಆಣೆ ಪ್ರಮಾಣ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಸವಾಲು ಹಾಕಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತರಲು, ವಾಸ್ತವ ಸ್ಥಿತಿ ಹೇಳಿದ್ದೇ‌ನೆ. ನಾನು ಅವಳಿಗೆ ದುಡ್ಡು ಕೊಟ್ಟಿಲ್ಲ ಅಂತಾ ಆಣೆ ಪ್ರಮಾಣ ಮಾಡಿ ಹೇಳಲಿ. ಅವರ ಮನೆ ದೇವರು ಹಟ್ಟಿಹೋಳಿ ವೀರಭದ್ರೇಶ್ವರನ ಮೇಲೆ ಆಣೆ ಮಾಡಲಿ. ನನ್ನ ಮನೆ ದೇವರಾದ ಕೊಲ್ಲಾಪುರ ಲಕ್ಷ್ಮೀ ದೇವರ ಮೇಲೆ ಆಣೆ ಮಾಡಲು ನಾನು ಸಿದ್ಧ ಎಂದರು.

ನನ್ನ ಉಪಕಾರ ಇಲ್ಲದೇ ಆರಿಸಿ ಬಂದಿದ್ದಾಳೆ ಎಂದು ಆಣೆ ಮಾಡಲಿ. ಇಡೀ ರಾಜ್ಯಕ್ಕೆ ಗೊತ್ತಿದೆ, ಲಕ್ಷ್ಮೀ ಹೆಬ್ಬಾಳ್ಕರ್ ಯಾರಿಂದ ಆರಿಸಿ ಬಂದಿದ್ದಾಳೆ ಎಂದು. ಆ ಹೆಣ್ಣು ಮಗಳಿಗೆ ರಾಜಕಾರಣ ಗೊತ್ತಿಲ್ಲ. ಬುಡಾ ಮೆಂಬರ್ ಮಾಡು ಅಂತಾ ಕಾಲಿಗೆ ಬಿದ್ದು ನನ್ನ ಬಳಿ ಕೇಳಿದ್ದಳು. ನಮ್ಮ ಮನೆದೇವರು ಲಕ್ಷ್ಮೀದೇವಿ ಮೇಲೆ ಆಣೆ..ನನ್ನ ಕಾಲು ಬಿದ್ದು ಬೇಡಿಕೊಂಡಿದ್ದಳು. ಲಿಂಗಾಯತ ಹೆಣ್ಣು ಮಗಳು ಬೆಳೆಯಲಿ ಅಂತಾ ಒಳ್ಳೆಯ ಉದ್ದೇಶಕ್ಕೆ ಸಹಾಯ ಮಾಡಿದೆ. ಅವಳ ಪ್ರತಿಕ್ರಿಯೆಗಳಿಗೆ ಮುಂದಿನ ದಿನಗಳಲ್ಲಿ ನಾನು ಉತ್ತರಿಸುತ್ತೇನೆ ಎಂದು ಹೇಳಿದ್ರು.

ಲಕ್ಷ್ಮೀ ಹೆಬ್ಬಾಳ್ಕರ್ ವ್ಯಕ್ತಿತ್ವ ಬೆಳಗಾವಿ ಜಿಲ್ಲೆಯ ಮೂಲೆಮೂಲೆಗೂ ಗೊತ್ತಿದೆ. ನಮ್ಮ ರಣತಂತ್ರ ಏನೆಂಬುದು ಮುಂದೆ ಚುನಾವಣೆಯಲ್ಲಿ ತೋರಿಸುತ್ತೇನೆ. ಕಾನೂನು ಹೋರಾಟಕ್ಕೆ ನಾನೂ ಸಹ ಸಿದ್ಧ ಎಂದು ರಮೇಶ್ ಜಾರಕಿಹೊಳಿ‌ ತಿರುಗೇಟು ಕೊಟ್ಟರು.

loading...