ಬಂಗಾರಪೇಟೆ ತಹಶಿಲ್ದಾರ ಹತ್ಯೆ ಖಂಡನೆ- ಹುಕ್ಕೇರಿ ತಾಲೂಕಿನ ಸರ್ಕಾರಿ ನೌಕರರಿಂದ ಪ್ರತಿಭಟನೆ

0
39

ಬಂಗಾರಪೇಟೆ ತಹಶಿಲ್ದಾರ ಹತ್ಯೆ ಖಂಡನೆ-
ಹುಕ್ಕೇರಿ ತಾಲೂಕಿನ ಸರ್ಕಾರಿ ನೌಕರರಿಂದ ಪ್ರತಿಭಟನೆ

ಕನ್ನಡಮ್ಮ ಸುದ್ದಿ -ಹುಕ್ಕೇರಿ:ಕೋಲಾರ ಜಿಲ್ಲೆಯ  ಬಂಗಾರಪೇಟೆ ತಾಲೂಕಿನ ದೊಡ್ಡ ಕೊಲವಂಚಿ ಗ್ರಾಮದ ಜಮೀನಿನ ಸರ್ವೆ ಕಾರ್ಯಕ್ಕೆ ತೆರಳಿದ್ದ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಸರ್ಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸಿ ಇಂದು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಹುಕ್ಕೇರಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಖಜಾಂಚಿ ಅವಿನಾಶ ಹೋಳೆಪ್ಪಗೊಳ ಮಾತನಾಡಿ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೊಡ್ಡ ಕಲವಂಚಿ ಗ್ರಾಮದಲ್ಲಿ ಜಮೀನು ಸರ್ವೆಗೆ ತೆರಳಿದ್ದ ವೇಳೆ ನಿವೃತ್ತ ಶಿಕ್ಷಕ ವೆಂಕಟಾಚಲಪತಿ ಎಂಬಾತ ಕರ್ತವ್ಯ ನಿರತ ತಹಶಿಲ್ದಾರ ಎದೆಗೆ ಚಾಕುವಿನಿಂದ ಇರಿದು ಚಂದ್ರಮೌಳೇಶ್ವರ ಅವರನ್ನು ಕೊಲೆ ಮಾಡಿದ್ದಾನೆ , ಈ ರೀತಿ ಸರಕಾರಿ ನೌಕರರ ಮೇಲೆ ಹಲ್ಲೆ ಖಂಡನೀಯವಾದದ್ದು .ಉನ್ನತ ಮಟ್ಟದ ಅಧಿಕಾರಿಗಳಿಗೆ ರಕ್ಷಣೆ ಇಲ್ಲವೇಂದರೆ ಇನ್ನು ಕೆಳ ಹಂತದ ನೌಕರರ ಸ್ಥಿತಿ ಏನು , ಈ ಘಟನೆಯಿಂದ ನಾಗರಿಕ ಸಮಾಜವೆ ತಲೆ ತಗ್ಗಿಸುವಂತಾಗಿದೆ .ಕೊಲೆ ಮಾಡಿರುವ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು .

ನಂತರ ತಹಸಿಲ್ದಾರ ಅಶೋಕ ಗುರಾಣಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎಂ ಬಿ ನಾಯಿಕ,
ಕಂದಾಯ ಇಲಾಖೆ ಘಟಕ ಅದ್ಯಕ್ಷ ಎನ್ ಆರ್ ಪಾಟೀಲ, ವಿವಿಧ ಘಟಕಗಳ ಅದ್ಯಕ್ಷರಾದ ಎಸ್ ಎಸ್ ಕರಿಗಾರ, ಹಿತವನಿ, ಕಾರ್ಯದರ್ಶಿ ಭಿಮಪ್ಪಾ ಖೇಮಾಳೆ,ಗೌತಮ ಚಲವಾದಿ , ಶಿವಕುಮಾರ ನಾಯಿಕ ,ಮೋಹನ ಕೆಳಗೆರಿ ,ಶಂಕರ ಕಾಂಬಳೆ ,ಪ್ರದೀಪ ನೇರ್ಲಿ ,ನಂದಗಾವಿ ,ಶ್ರೀದರ ನಡುವಿನಮನಿ ,ಎನ್ ಆರ್ ಪಾಟೀಲ, ಎನ್ ಬಿ ಗುಡಸಿ, ಎಚ್ ಎಲ್ ಪೂಜಾರ ಮೊದಲಾದವರು ಉಪಸ್ಥಿತರಿದ್ದರು.

loading...